ಬೇಕಾಗುವ ಪದಾರ್ಥಗಳು…
- ಹೆಸರುಕಾಳು- ಒಂದು ಬಟ್ಟಲು
- ಅಕ್ಕಿ- ಅರ್ಧ ಬಟ್ಟಲು
- ತೆಂಗಿನಕಾಯಿತುರಿ- ಕಾಲು ಬಟ್ಟಲು
- ಕಡಲೆ ಬೇಳೆ-ಒಂದು ಚಮಚ
- ಶುಂಠಿ-ಒಂದು ಅಂಗುಲ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಹೆಸರುಕಾಳು, ಅಕ್ಕಿ, ಕಡಲೆ ಬೇಳೆ ಎಲ್ಲವನ್ನೂ ಬೇರೆ ಬೇರೆಯಾಗಿ 5-6 ಗಂಟೆಗಳ ಕಾಲ ನೆನೆಸಿಕೊಳ್ಳಿ.
- ನಂತರ ನೀರು ತೆಗೆದು, ಕಾಯಿತುರಿ, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಉಪ್ಪು ಸೇರಿಸಿ ಹಿಟ್ಟನ್ನು ಹದ ಮಾಡಿಕೊಂಡು ಹತ್ತು ನಿಮಿಷ ನೆನೆಯಲು ಬಿಡಿ.
- ಇದೀಗ ಒಲೆಯ ಮೇಲೆ ನಾನ್ಸ್ಟಿಕ್ ತವಾದ ಇಟ್ಟು, ತೆಳುವಾಗಿ ದೋಸೆ ಹೊಯ್ದು ಎರಡೂ ಬದಿಯಲ್ಲೂ ಬೇಯಿಸಿರಿ. ಇದನ್ನು ಬಿಸಿ ಇರುವಾಗಲೆ ಕಾಯಿಚಟ್ನಿಯೊಂದಿಗೆ ಸವಿಯಿರಿ.