ಯುವತಿಯನ್ನು ರಕ್ಷಿಸಲು ಮುಂದಾದ ವೇಳೆ ಪಾಕಿಸ್ತಾನ ವಾಯುಪಡೆಯ ಕ್ಯಾಪ್ಟನ್ ಗುಂಡಿಕ್ಕಿ ಹತ್ಯೆ; ಇಸ್ಲಾಮಾಬಾದ್‌ನಲ್ಲಿ ಘಟನೆ*

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಯುವತಿಯನ್ನು ಅಪಹರಿಸಲು ನಡೆದ ಯತ್ನವನ್ನು ತಡೆಯಲು ಮುಂದಾದ ಪಾಕಿಸ್ತಾನ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ Asim Tariq ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಸಮಾ ಟಿವಿ ವರದಿ ಪ್ರಕಾರ, ಮಾರ್ಗಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಶಾಹೀನ್ ಚೌಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

9ನೇ ಅವೆನ್ಯೂ ಮೂಲಕ ಪ್ರಯಾಣಿಸುತ್ತಿದ್ದ ವೇಳೆ, ಒಬ್ಬ ವ್ಯಕ್ತಿ ಯುವತಿಯನ್ನು ಬಲವಂತವಾಗಿ ತನ್ನ ವಾಹನಕ್ಕೆ ಕೂರಿಸಲು ಯತ್ನಿಸುತ್ತಿರುವುದನ್ನು ಅಸೀಂ ತಾರಿಕ್ ಗಮನಿಸಿದ್ದರು. ತಕ್ಷಣವೇ ಅವರು ಮಧ್ಯಪ್ರವೇಶಿಸಿ ಆರೋಪಿಯನ್ನು ತಡೆಯಲು ಮುಂದಾದರು.

ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದ ವೇಳೆ, ಯುವತಿ ರಸ್ತೆ ದಾಟಿ ಸುರಕ್ಷಿತ ಸ್ಥಳಕ್ಕೆ ತೆರಳಲು ಯಶಸ್ವಿಯಾದಳು. ಇದೇ ಸಂದರ್ಭದಲ್ಲಿ ಆರೋಪಿ ಅಸೀಂ ತಾರಿಕ್ ಅವರನ್ನು ನಿಂದಿಸಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಸೀಂ ತಾರಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಪರಾರಿಯಾಗಿದ್ದಾನೆ.

ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಯುವತಿಯ ಸಹೋದ್ಯೋಗಿ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಲಿಫ್ಟ್ ನೀಡುವುದಾಗಿ ಹೇಳಿ, ಬಳಿಕ ಬೇರೆ ಮಾರ್ಗಕ್ಕೆ ವಾಹನ ತಿರುಗಿಸಿ ಕರೆದೊಯ್ಯಲು ಯತ್ನಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯುವತಿ ವಿರೋಧ ವ್ಯಕ್ತಪಡಿಸಿದಾಗ ಆತ ಬಲವಂತಕ್ಕೆ ಮುಂದಾಗಿದ್ದು, ಅದೇ ವೇಳೆ ಅಸೀಂ ತಾರಿಕ್ ಮಧ್ಯಪ್ರವೇಶಿಸಿದ್ದರು.

ಈ ಘಟನೆಯ ಕುರಿತು ಪಾಕಿಸ್ತಾನದ ಫೆಡರಲ್ ಗೃಹ ಸಚಿವ Mohsin Naqvi ಇಸ್ಲಾಮಾಬಾದ್ ಪೊಲೀಸರಿಂದ ತುರ್ತು ವರದಿ ಕೇಳಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!