ದುಬೈನಲ್ಲಿ ಅದ್ದೂರಿಯಾಗಿ ‘ಆಟಿಡೊಂಜಿ ದಿನತಾ ಉತ್ಸವ–2026’

ದುಬೈ: ತುಳುನಾಡಿನ ಸಾಂಪ್ರದಾಯಿಕ ಅಡುಗೆ, ಕಲೆ, ಸಂಸ್ಕೃತಿ ಹಾಗೂ ಸೌಹಾರ್ದತೆಯನ್ನು ಅನಾವರಣಗೊಳಿಸುವ ‘

ಆಟಿಡೊಂಜಿ ದಿನತಾ ಉತ್ಸವ–2026’ರ 5ನೇ ಆವೃತ್ತಿ ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಯುಎಇಯ ವಿವಿಧ ಭಾಗಗಳ ಸಾವಿರಾರು ತುಳು–ಕನ್ನಡಿಗರನ್ನು ಒಂದೆಡೆ ಸೇರಿಸಿ ತುಳುನಾಡಿನ ವೈವಿಧ್ಯಮಯ ಪರಂಪರೆಯನ್ನು ಪರಿಚಯಿಸುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ.

ಉತ್ಸವದಲ್ಲಿ ಕಡ್ಲೆ ಗಸಿ, ಚಟ್ನಿ, ಹೋಳಿಗೆ, ಅಪ್ಪ, ನೀರ್ ದೋಸೆ, ಪೆಲಕಾಯಿ ಗಟ್ಟಿ, ಸುಕುರ ಉಂಡೆ , ಕುಡುತ್ತ ಚಟ್ನಿ, ಸಾರು, ನುಗ್ಗೆ ಅಂಬಡೆ, ತೆತ್ಲ ಗಸಿ, ಮೆಂತೆದ ಗಂಜಿ, ತೆಕ್ಕರಾದ ಅಡ್ಯೆ, ಗರಿಗೆಯ, ಬಾಣೆಲದ ಅಡ್ಯೆ, ಅರಿತ ಉಂಡೆ, ಕಾಂಚಾಲ್ದ ಕಜಿಪು, ಗುರಿಯಪ್ಪ, ಪುಂಡಿ ಗಸಿ, ಸಂತಾಣಿ, ಪೆಲಕಾಯಿದ ಅಪ್ಪ, ಕುಕ್ಕುಡ ಸಾರು, ನೈ ಚೋರು, ಕಡ್ಲೆ–ಮನೋಲಿ, ಪಚ್ಚಡಿ, ಗೊಂಕು, ತಟ್ಟೆ ಇಡ್ಲಿ, ಸಾಂಬಾರ್, ರಸಂ ಸೇರಿದಂತೆ ವಿವಿಧ ಸಾಂಪ್ರದಾಯಿಕ ತುಳುನಾಡಿನ ಖಾದ್ಯಗಳು, ಪಾಯಸಗಳು ಹಾಗೂ ಔಷಧೀಯ ಕಷಾಯಗಳನ್ನು ಸವಿಯುವ ಅವಕಾಶ ಇರಲಿದೆ.

ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 10 ಗುಂಪು ಹಾಗೂ ಏಕವ್ಯಕ್ತಿ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಪ್ರದರ್ಶನಗಳು, 50ಕ್ಕೂ ಅಧಿಕ ಗಾಯಕರ ಸಂಗೀತ ಕಾರ್ಯಕ್ರಮ, ಮಿಮಿಕ್ರಿ, ಹಾಸ್ಯ ಕವಿತೆ, ಕಿರು ಹಾಸ್ಯ ನಾಟಕ, ಫ್ಯಾನ್ಸಿ ಡ್ರೆಸ್ ಹಾಗೂ ವಿವಿಧ ಜಾನಪದ ಕಲಾ ಪ್ರದರ್ಶನಗಳು ನಡೆಯಲಿವೆ. ಒಟ್ಟಾರೆ ಸುಮಾರು 100 ಕಲಾವಿದರು ಹಾಗೂ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಉತ್ಸವದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ರಿಯಾಯಿತಿ ದರದಲ್ಲಿ ಕನ್ನಡಕದ ಲೆನ್ಸ್, ಆಯುರ್ವೇದ ಸಲಹೆ, ಆರೋಗ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ವೆಲ್‌ನೆಸ್ ಕೌಂಟರ್‌ಗಳನ್ನು ಒಳಗೊಂಡ ವೈದ್ಯಕೀಯ ಮತ್ತು ಜೀವನಶೈಲಿ ಪೆವಿಲಿಯನ್ ಇರಲಿದೆ. ಕುಟುಂಬಗಳಿಗಾಗಿ ಕೌಶಲ್ಯಾಧಾರಿತ ವಿವಿಧ ಆಟಗಳು ಹಾಗೂ ಆಕರ್ಷಕ ಬಹುಮಾನಗಳೊಂದಿಗೆ ವಿಶೇಷ ಗೇಮ್ಸ್ ಝೋನ್ ಕೂಡ ಇರಲಿದೆ.

ಉತ್ಸವದ ಸಂಪೂರ್ಣ ಕಾರ್ಯಕ್ರಮವನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಹಾಗೂ ದೈಜಿವರ್ಲ್ಡ್ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುವುದು. ಇದರೊಂದಿಗೆ ಚಿತ್ರಗಳ ಪ್ರಚಾರ, ಉತ್ಪನ್ನಗಳ ಬಿಡುಗಡೆ ಹಾಗೂ ಇತರ ಉದ್ಘಾಟನಾ ಕಾರ್ಯಕ್ರಮಗಳಿಗೂ ವೇದಿಕೆ ಕಲ್ಪಿಸುವ ಸಾಧ್ಯತೆಯಿದೆ.

ಉತ್ಸವದ ಪ್ರವೇಶ ಕೂಪನ್ ದರ ಕೇವಲ 10 ದಿರ್ಹಂ ಆಗಿದ್ದು, ಸ್ಥಳದಲ್ಲೇ ಪಡೆಯಬಹುದು. ಭಾಗವಹಿಸುವಿಕೆ ಹಾಗೂ ಮಾಹಿತಿಗಾಗಿ ಸಂಧ್ಯಾ ಪ್ರಸಾದ್ (050 1273781), ಆಲ್ವಿನ್ ಪಿಂಟೋ (050 4583930), ಸುದರ್ಶನ್ ಹೆಗ್ಡೆ (050 5531192), ವೀಣಾ ಹೆಗ್ಡೆ (056 5659988), ಅಶೋಕ್ ಬೈಲೂರು (050 5588745), ಕಿರಣ್ ಕೊಟ್ಟಾರಿ (050 4735319), ಮನೋಜ್ ಪೂಜಾರಿ (052 1816800), ಆನಂದ್ ಪಟ್ಟೆ (055 4367780), ರೇಷ್ಮಾ ಡಿಸೋಜಾ (055 9195606) ಹಾಗೂ ಆಸ್ಕರ್ ರೇಗೋ (055 5892443) ಅವರನ್ನು ಸಂಪರ್ಕಿಸಬಹುದು.

‘ಆಟಿದೊಂಜಿ ದಿನತಾ ಉತ್ಸವ–2026’ ಸೀಸನ್–5 ತುಳುನಾಡಿನ ಆಹಾರ, ಸಂಸ್ಕೃತಿ, ಏಕತೆ ಹಾಗೂ ಸೌಹಾರ್ದತೆಯ ಸಂಭ್ರಮವನ್ನು ದುಬೈನಲ್ಲಿ ಅನಾವರಣಗೊಳಿಸುವ ಮೂಲಕ ಯುಎಇಯ ತುಳು–ಕನ್ನಡಿಗರಿಗೆ ತಮ್ಮ ನೆಲದ ಪರಂಪರೆಯೊಂದಿಗೆ ಬೆರೆಯುವ ವಿಶೇಷ ವೇದಿಕೆಯಾಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!