ಮಂಜೇಶ್ವರ ಬ್ಲಾಕ್ ಪಂಚಾಯತ್ ವಂಚನೆ ಪ್ರಕರಣ; ಬ್ಲೋಕ್ ಅಧ್ಯಕ್ಷರು ರಾಜೀನಾಮೆ ನೀಡಬೇಕು, ಕಾರ್ಯದರ್ಶಿಯ ತನಿಖೆ ಆಗಬೇಕು -ಬಿಜೆಪಿ

ಹೊಸಂಗಡಿ :ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಮನೆ ನಿರ್ಮಾಣಕ್ಕೆ ಬಡವರಿಗೆ ಕೊಡಬೇಕಾದ 17ಲಕ್ಷ ವಂಚನೆ ಪ್ರಕರಣ ಇನ್ನು ಆರೋಪಿಯ ಬಂಧನ ಆಗಿಲ್ಲ. ತನಿಖೆನು ಆಗುತ್ತಿಲ್ಲ, ವಿಜಿಲೆನ್ಸ್ ದಾಳಿ ಮಾಡಿಲ್ಲ.. 17ಲಕ್ಷ ನುಂಗಿದ ಆರೋಪಿಯನ್ನು ತೋರಿಕೆಗೆ ಕೆಲಸದಿಂದ ವಜಾ ಗೊಳಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಬ್ಲಾಕ್ ಪಂಚಾಯತ್ ಅಧ್ಯಕ್ಷರು ಹಾಗೂ ಬ್ಲಾಕ್ ಕಾರ್ಯದರ್ಶಿ ಪ್ರಯತ್ನ ಎಂದು ಬಿಜೆಪಿ ಆರೋಪಿಸಿದೆ.

ಆರೋಪಿಯನ್ನು ಬಂದಿಸದೆ ತನಿಖೆ ಆರಂಭ ಮಾಡದೇ ಬ್ಲಾಕ್ ಆಡಳಿತ ಬಡವರಿಗೆ ವಂಚನೆ ಮಾಡುತ್ತಿದೆ.. ಹಾಗಾದರೆ ವಂಚನೆ ಆಗಿರುವ 17ಲಕ್ಷ ರೂ ಗಳನ್ನು ಬ್ಲಾಕ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ವಂತ ಕೈ ಯಿಂದ ಫಲನುಭವಿಗಳಿಗೆ ನೀಡಬೇಕೆಂಬುದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಗ್ರಹಿಸಿದರು.

ಹಾಗೂ 17ಲಕ್ಷ ಲೂಟಿಯನ್ನು ಕೇವಲ ಕ್ಲರ್ಕ್ ತಲೆಗೆ ಕಟ್ಟಿ ಪ್ರಕರಣವನ್ನು ಲಘುಕರಿಸಲಾಗುತಿದೆ. ನಕಲಿ ಖಾತೆ ಗೆ ದುಡ್ಡು ಹೋಗಲು ಚೆಕ್ ಸಹಿ ಮಾಡಿದ ಬ್ಲಾಕ್ ಕಾರ್ಯದರ್ಶಿ, ಅನುಮತಿ ನೀಡಿದ ಬ್ಲಾಕ್ ಅಧ್ಯಕ್ಷರು, ಹಣ ವರ್ಗಾಯಿಸಿದ ಟ್ರೇಸರಿ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಅವರನ್ನು ವಜಾ ಗೊಳಿಸಬೇಕು ಎಂದು ಬಿಜೆಪಿ ಅಗ್ರಹಿಸಿದೆ. ಫಲನುಭವಿಗಳಿಗೆ ಅದ ವಂಚನೆಗೆ ಬ್ಲಾಕ್ ಅಧ್ಯಕ್ಷರು ಕಾರ್ಯದರ್ಶಿ ನೇರ ಹೊಣೆಗಾರರು ಎಂದು ಆದರ್ಶ ಬಿ ಎಂ ಹೇಳಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!