ಪುತ್ತೂರು ಸರ್ಕಾರಿ ಆಸ್ಪತ್ರೆಗೆ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಭೇಟಿ

ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ ಇವರು ದಿನಾಂಕ 11-07-2026ರಂದು ಸಂಜೆ ಗಂಟೆ 4.30ರಿಂದ ನಗರ ಠಾಣೆಯ ಪೋಲೀಸ್‍ ಸಿಬ್ಬಂದಿ ಶ್ರೀ ಪ್ರಭಾಕರ ಮೋರೆ ಹಾಗೂ ಸಮಿತಿಯ ಸಿಬ್ಬಂದಿಯವರೊಂದಿಗೆ ಪುತ್ತೂರು ತಾಲೂಕಿನ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಪುತ್ತೂರು ಸರಕಾರಿ ಆಸ್ಪತ್ರೆಗೆ ನ್ಯಾಯಾಧೀಶರು ಭೇಟಿ ನೀಡಿದ ಸಂದರ್ಭ ಡಾ. ಅಜಯ್‍ ಅವರು ಆಸ್ಪತ್ರೆಯ ಬಗ್ಗೆ ವಿಶ್ಲೇಷಣೆ ಮಾಡುತ್ತಾ – ಹೊರ ರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ (ಪುರುಷರ, ಮಹಿಳೆಯರ ವಿಭಾಗ ಹಾಗೂ ಮಕ್ಕಳ ವಿಭಾಗ)ಕ್ಕೆ ಪರಿಶೀಲನೆ ನಡೆಸಲು ನ್ಯಾಯಾಧೀಶರ ಜೊತೆಗೆ ಹೆಜ್ಜೆ ಹಾಕುತ್ತಾ ಪ್ರತೀಯೊಂದು ವಾಬಗ್ಗೆ ತಿಳಿಸಿದರು. 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್‍ ವಿಭಾಗಕ್ಕೆ ಭೇಟಿ ನೀಡಿದರು.

ವಿಚಾರಣೆಯಿಂದ ಸಿಬ್ಬಂದಿಗಳ ಸಂಖ್ಯೆ 28 ಹಾಗೂ ರೋಗಿಗಳ ಸಂಖ್ಯೆ 192 ಎಂಬುದನ್ನು ತಿಳಿದುಕೊಂಡರು. ಡಯಾಲಿಸಿಸ್‍ ಯಂತ್ರದ ಕೊರತೆ ಕಂಡು ಬಂದ ಕಾರಣ ನ್ಯಾಯಾಧೀಶರು ಆಸ್ಪತ್ರೆಯ RHO ಅವರನ್ನು ಮಾತುಕತೆಗೆ ನ್ಯಾಯಾಲಯಕ್ಕೆ ಭೇಟಿ ನೀಡುವಂತೆ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!