ಮೂಡುಬಿದಿರೆ, ಜು. 24: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ ವೇಳೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ನೀಟ್ ಅಕ್ರಮದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಅದನ್ನು ಪ್ರಶ್ನಿಸಿದವರ ವಿರುದ್ಧ ಕೇಂದ್ರ ಸರ್ಕಾರ ದಮನಕಾರಿ ಕ್ರಮ ಕೈಗೊಳ್ಳುತ್ತಿರುವುದು ಖಂಡನೀಯ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ನೀಟ್ ಅಕ್ರಮದಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೂ ಅನ್ಯಾಯವಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಪರವಾಗಿ ಕಾಂಗ್ರೆಸ್ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ,ಪ್ರಮುಖರಾದ ಸುರೇಶ್ ಪ್ರಭು, ಚಂದ್ರಹಾಸ ಸನಿಲ್,ರುಕ್ಕಯ್ಯ ಪೂಜಾರಿ,ಜೊಸ್ಸಿ ಮಿನೇಜಸ್, ರಮೇಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಇಕ್ಬಾಲ್ ಕರೀಮ್, ಟಿ.ಎನ್.ಕೆಂಬಾರೆ, ಸತೀಶ್ ಕೋಟ್ಯಾನ್, ರೆಕ್ಸನ್ ಪಿಂಟೊ, ಪ್ರವೀಣ್ ಇರುವೈಲ್, ಕುಮಾರ್ ಪೂಜಾರಿ, ಪ್ರದೀಪ್ ಇರುವೈಲ್, ದಿನೇಶ್ ಪ್ರಭು ಇರುವೈಲ್, ಪ್ರಶಾಂತ್ ಅಮೀನ್,ಸವಿತಾ ಟಿ.ಎನ್, ಸುಪ್ರಿಯಾ ಡಿ.ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ಹರೀಶ್ ಆಚಾರ್ಯ, ಪುರುಷೋತ್ತಮ ನಾಯಕ್,ಅನೀಶ್ ಡಿಸೋಜ,ಪಿ.ಕೆ.ಥೋಮಸ್, ಕೊರಗಪ್ಪ, ವಲೇರಿಯನ್ ಸಿಕ್ವೇರಾ, ಶೇಖರ್ ಬೊಳ್ಳಿ, ಸತೀಶ್ ಭಂಡಾರಿ,ಸುರೇಶ್ ಕೋಟ್ಯಾನ್, ವರುಣ್, ಲತೀಫ್,ಅಶ್ರಫ್ ಮರೋಡಿ, ಸಲಾಮ್ ಹೊಸಂಗಡಿ,ಗಣೇಶ್ ಶೆಟ್ಟಿ, ಶಾಬಾಝ್ ಬೆಳುವಾಯಿ, ಹಿಮಾಯತ್, ಮತ್ತಿತರರು ಉಪಸ್ಥಿತರಿದ್ದರು.



