ಬೆಂಗಳೂರು, ಜು. 30: “ಶ್ರಮಕ್ಕೆ ಗೌರವ – ಹಕ್ಕುಗಳಿಗೆ ಹೋರಾಟ” ಎಂಬ ಘೋಷವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಕರ್ನಾಟಕದ ವತಿಯಿಂದ ಆಗಸ್ಟ್ 1ರಿಂದ 31ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಸದಸ್ಯತ್ವ ಅಭಿಯಾನದ ಅಧಿಕೃತ ಪೋಸ್ಟರ್ ಅನ್ನು ಇಂದು ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ರಾಜ್ಯ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಬಿಡುಗಡೆಗೊಳಿಸಿದರು.

ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಾಮಾಜಿಕ ಭದ್ರತೆ ಮತ್ತು ಸಂಘಟನೆಯ ಬಲವರ್ಧನೆಯ ಉದ್ದೇಶದಿಂದ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಎಸ್‌ಡಿಟಿಯು ಸದಸ್ಯತ್ವಕ್ಕೆ ಸೇರ್ಪಡೆಗೊಳಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖಂಡರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಟಿಯು ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್,ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮ್ ಜಿ.ಕೆ. (ಗುರುವಾಯನಕೆರೆ), ರಾಜ್ಯ ಕಾರ್ಯದರ್ಶಿಗಳಾದ ಸೆಯ್ಯದ್ ಅಲ್ತಾಫ್ (ಗುಲ್ಬರ್ಗ) ಹಾಗೂ ಸೆಯ್ಯದ್ ಮೂಸಾ (ಬೆಂಗಳೂರು), ರಾಜ್ಯ ಕೋಶಾಧಿಕಾರಿ ಉಬೈದುಲ್ಲಾ ಶರೀಫ್ (ಬೆಂಗಳೂರು), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬೂಬಕರ್ ಮದ್ದ, ಕಾದರ್ ಪರಂಗಿಪೇಟೆ, ಅಬ್ದುಲ್ ಹಮೀದ್ ಸಾಲ್ಮರ, ಹನೀಫ್ ಮೂಳೂರು, ಅಮೀನ್ ಸೇಟ್ (ಮೈಸೂರು), ಕಾಸಿಂ ರಬ್ಬಾನಿ (ಹಾವೇರಿ), ರಹಿಮಾನ್ ಬೋಳಿಯಾರ್ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

