29-8-2026 ಶನಿವಾರದ ಹವಾಮಾನ ಮುನ್ಸೂಚನೆ

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ನಿನ್ನೆ ಆಗಾಗ ಸಣ್ಣ ಸಣ್ಣ ಮಳೆಯಾಗಿದೆ. ಉಡುಪಿಯ ಬೈಂದೂರು ಕುಂದಾಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಮಲೆನಾಡಿನ ಮಡಿಕೇರಿ, ವಿರಾಜಪೇಟೆ ಸೋಮವಾರಪೇಟೆ ಮೂಡಿಗೆರೆ ಶೃಂಗೇರಿ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿತ್ತು. ಒಳನಾಡಿನ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ – ಬಿಸಿಲಿನ ವಾತಾವರಣ ಇರಲಿದ್ದು ಆಗಾಗ ಒಂದೆರಡು ನಿಮಿಷದ ಸಣ್ಣ ಮಳೆಯಾಗಬಹುದು. ಸುಳ್ಯ ಪುತ್ತೂರು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಒಂದೆರಡು ಸಾಧಾರಣ ಮಳೆಯಾಗಬಹುದು. ರಾತ್ರಿಯೂ ತುಂತುರು ಮಳೆಯಾಗಬಹುದು. ಉ.ಕ ಉಡುಪಿ ಕರಾವಳಿ ತೀರದ ತಾಲೂಕುಗಳಲ್ಲಿ, ಘಟ್ಟಪ್ರದೇಶಗಳ ಸುತ್ತಮುತ್ತ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದುರ್ಬಲ ಮುಂಗಾರಿನ ಕಾರಣ ಬಿಸಿಲು,ಸೆಕೆಯ ವಾತಾವರಣ ಇರುವುದರಿಂದ ಮತ್ತು ಬಂಗಾಳ ಕೊಲ್ಲಿಯ ಉತ್ತರದಲ್ಲಿ ಲೋ ಪ್ರೆಷರ್ ಆದ ಕಾರಣ ಸೆಪ್ಟೆಂಬರ್ 3 ತನಕ ಪ್ರತಿದಿನ ಒಂದೆರಡು ಮಳೆ ಮುಂದುವರೆಯಬಹುದು.

ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲಿ ಮಡಿಕೇರಿ ಸಕಲೇಶಪುರ ಮೂಡಿಗೆರೆ ಶೃಂಗೇರಿ ತೀರ್ಥಹಳ್ಳಿ ಒಂದೆರಡು ಸಾಮಾನ್ಯ ಮಳೆಯಾಗಬಹುದು. ಉಳಿದ ತಾಲ್ಲೂಕುಗಳಲ್ಲಿ ಮೋಡ -ಬಿಸಿಲಿನ ವಾತಾವರಣ ಇರಲಿದ್ದು ಸಂಜೆ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬೆಂಗಳೂರು – ಗ್ರಾಮಾಂತರ ತುಮಕೂರು ಮಂಡ್ಯ ರಾಮನಗರ ದಾವಣಗೆರೆ ವಿಜಯನಗರ ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಬಹುದು. ಕೆಲವೆಡೆ ಸಣ್ಣ ಪ್ರಮಾಣದ ಮಳೆಯ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಕೊಪ್ಪಳ ಬಾಗಲಕೋಟೆ ಬಿಜಾಪುರ ಬೀದರ್ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯಾಗಬಹುದು.

ಉತ್ತರ ಪ್ರದೇಶದಲ್ಲಿರುವ ಲೋ ಪ್ರೆಷರ್ ಇವತ್ತು ಶಿಥಿಲ ಆಗಬಹುದು. ಬಂಗಾಳ ಕೊಲ್ಲಿಯ ಉತ್ತರದಲ್ಲಿ ಬಾಂಗ್ಲಾ ಪ. ಬಂಗಾಳದ ಸಮೀಪ ಇರುವ ಮೇಲ್ಮೈ ಸುಳಿಗಾಳಿ ಲೋ ಪ್ರೆಷರ್ ಆಗಿದೆ. ಇದು ಪಶ್ಚಿಮಕ್ಕೆ ಹೋಗಲಿದ್ದು ಒಂದು ವಾರ ಮಧ್ಯಭಾರತದಲ್ಲಿ ನಿಧಾನವಾಗಿ ಚಲಿಸಬಹುದು. ದಕ್ಷಿಣ ಭಾರತಕ್ಕೆ ಜಾಸ್ತಿ ಪ್ರಭಾವ ಬೀರಲಿಕ್ಕಿಲ್ಲ. ಆದರೇ ಕರಾವಳಿ ಮಲೆನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುಂದುವರೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!