ಐವನ್ ಡಿಸೋಜಾ ಶಿಫಾರಸ್ಸು; 7 ಅರ್ಜಿದಾರರಿಗೆ ಪರಿಹಾರ ಧನ ಬಿಡುಗಡೆ

ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ 7 ಜನ ಅರ್ಜಿದಾರರಿಗೆ ರೂ.5,64,694/- ( ರೂಪಾಯಿ ಐದು ಲಕ್ಷದ ಆರವತ್ತನಾಲ್ಕು ಸಾವಿರದ ಅರುನೂರ ತೊಂಬತ್ತನಾಲ್ಕು) ಪರಿಹಾರ ಧನ
ಅರ್ಜಿದಾರರ ಖಾತೆಗೆ ಬಿಡುಗಡೆ.

ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರ ಮನವಿಯ ಮೇರೆಗೆ ಶ್ರೀ ನವೀನ್ ಕೋಟ್ಯಾನ್ ಬೋಳೂರು ಇವರಿಗೆ ರೂ.2.00ಲಕ್ಷ, ಶ್ರೀಮತಿ ಸಾಜಿಯಾ ಮಮ್ತಾಜ್ ಕಣ್ಣೂರು ಇವರಿಗೆ 1,92,770/-, ಶ್ರೀ ಉಮ್ಮರ್ ಫಾರೂಕ್ ಪುತ್ತೂರು ಇವರಿಗೆ ರೂ.1,097,000/- ಶ್ರೀಮತಿ ಹೇಮಲತಾ ಕಿನ್ನಿಗೋಳಿ ಇವರಿಗೆ ರೂ.27,741/-, ಶ್ರೀಮತಿ ಜಮೀಲ ಕಣ್ಣೂರು ಇವರಿಗೆ ರೂ. 19,324/-, ಶ್ರೀ ಕೃತಿನ್ ಜಿ. ಶೆಟ್ಟಿ ಇವರಿಗೆ ರೂ. 8,262/-, ಶ್ರೀಮತಿ ಶಕೀನ ಭಾನು ಕಣ್ಣೂರು ಇವರಿಗೆ ರೂ.6,897/-,
ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್ ರಾವ್ ಹಾಗೂ ಸತೀಶ್ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಮನುರಾಜ್ ಎಂ.ಪಿ., ಮೀನಾ ಟೆಲ್ಲಿಸ್, ಇಮ್ರಾನ್ ಎ.ಆರ್., ಹಬೀಬುಲ್ಲಾ ಕಣ್ಣೂರು ಹಾಗೂ ನಾರಾಯಣ ಕೊಟ್ಟ್ಯಾನ್ ಉಪಸ್ಥಿತರಿದ್ದರು.

SHARE
Loading spinner

2 thoughts on “ಐವನ್ ಡಿಸೋಜಾ ಶಿಫಾರಸ್ಸು; 7 ಅರ್ಜಿದಾರರಿಗೆ ಪರಿಹಾರ ಧನ ಬಿಡುಗಡೆ

Leave a Reply

Your email address will not be published. Required fields are marked *

error: Content is protected !!