ಕರಾವಳಿಯಲ್ಲಿ ಮೋಡ–ಬಿಸಿಲಿನ ವಾತಾವರಣ; ಸಂಜೆ–ರಾತ್ರಿ ಮಳೆ ಸಾಧ್ಯತೆ

ಕರಾವಳಿಯ ದ.ಕ. ಕಾಸರಗೋಡು ಉಡುಪಿ ಉ.ಕ ಜಿಲ್ಲೆಗಳಲ್ಲಿ ನಿನ್ನೆ ರಾತ್ರಿ ಸಾಮಾನ್ಯ ಮಳೆಯಾಗಿದೆ. ಮಲೆನಾಡಿನ ಘಟ್ಟಪ್ರದೇಶಗಳಲ್ಲಿ ಮಳೆಯಾಗಿದ್ದು , ತೀರ್ಥಹಳ್ಳಿ ಶೃಂಗೇರಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿತ್ತು. ತುಮಕೂರಿನ ಶಿರಾ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದ್ದು ಉಳಿದಂತೆ ಒಳನಾಡಿನ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ – ಬಿಸಿಲಿನ ವಾತಾವರಣ ಇರಲಿದ್ದು ಕಾಸರಗೋಡು ದ.ಕ. ಉಡುಪಿ ಉ.ಕ ಜಿಲ್ಲೆಗಳಲ್ಲಿ ಸಂಜೆ – ರಾತ್ರಿ 10-30mm ತನಕ ಒಂದೆರಡು ಸಾಮಾನ್ಯ ಮಳೆಯಾಗಬಹುದು. ಹಗಲು ಬಹುತೇಕ ಬಿಸಿಲಿನ ವಾತಾವರಣ ಇರಲಿದ್ದು ಪ್ರತಿದಿನ ಒಂದೆರಡು ಮಳೆ ಮುಂದುವರೆಯಲಿದೆ. ಸೆಪ್ಟೆಂಬರ್ 4 ತನಕ ದಟ್ಟ ಮೋಡ ಮತ್ತು ಗಾಳಿಯ ಒತ್ತಡ ಅಧಿಕ ಅಧಿಕವಿದ್ದಾಗ ಸೀಮಿತ ಪ್ರದೇಶಗಳಲ್ಲಿ ದೊಡ್ಡ ಹನಿಗಳ ಸಾಧಾರಣ ಮಳೆ ಮುಂದುವರೆಯಬಹುದು.

ಮಲೆನಾಡಿನ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಮಡಿಕೇರಿ ಮೂಡಿಗೆರೆ ಶೃಂಗೇರಿ ತೀರ್ಥಹಳ್ಳಿ ಹೊಸನಗರ ಸಾಗರ ತಾಲ್ಲೂಕುಗಳ ಘಟ್ಟಪ್ರದೇಶಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗಬಹುದು. ಉಳಿದ ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿ ಬಿಸಿಲಿನ ವಾತಾವರಣದ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನಲ್ಲಿ ಮೋಡ ಕಡಿಮೆ ಆಗಿದ್ದು ಚಾಮರಾಜನಗರ ಮೈಸೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಕೆಲವೆಡೆ ಸಣ್ಣ ಮಳೆಯಾಗುವ ಮುನ್ಸೂಚನೆ ಇದೆ . ಉಳಿದ ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಇರಲಿದ್ದು ಕೆಲವೆಡೆ ತುಂತುರು ಮಳೆಯಾಗಬಹುದು.

ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಂಜೆ ಭಾಗಷಃ ಮೋಡದ ವಾತಾವರಣ ಇರಬಹುದು. ಅನಿರೀಕ್ಷಿತ ಮಳೆಯಾಗಬೇಕಷ್ಟೇ ಹೊರತು ಮಳೆ ಮುನ್ಸೂಚನೆ ಇಲ್ಲ.

ಪ. ಬಂಗಾಳದ ಲೋ ಮುಂದುವರೆಯಲಿದ್ದು ಇದರಿಂದಾಗಿ ಪೂರ್ವ ಭಾರತದಲ್ಲಿ ಉತ್ತಮ ಮಳೆ ಮುಂದುವರೆಯಲಿದ್ದು ದಕ್ಷಿಣ ಭಾರತಕ್ಕೆ ಜಾಸ್ತಿ ಪ್ರಭಾವ ಬೀರಲಿಕ್ಕಿಲ್ಲ. ಸೆಪ್ಟೆಂಬರ್ ಮೊದಲ ವಾರ ಕೇರಳ ತಮಿಳುನಾಡು ಕರ್ನಾಟಕದ ಅಲ್ಲಲ್ಲಿ ಗುಡುಗು ಮಳೆ ಆರಂಭವಾಗಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!