ಶಿವರಾಜ್‌ಕುಮಾರ್ ಎದುರೇ ಪವರ್ ಫ್ಲ್ಯಾಟ್ ಸ್ಫೋಟ: ಅದೃಷ್ಟವಶಾತ್ ಪಾರಾದ ನಟ

ಚಿತ್ರದುರ್ಗ: ‘ಬೇಲ್’ ಚಿತ್ರದ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಶಿವರಾಜ್‌ಕುಮಾರ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ ವೇಳೆ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಖಾಸಗಿ ಶೋರೂಂಗೆ ಶಿವರಾಜ್‌ಕುಮಾರ್ ಪ್ರವೇಶಿಸುತ್ತಿದ್ದ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸ್ವಾಗತ ಕೋರಿದ್ದರು. ಈ ಸಂದರ್ಭ ಶಿವಣ್ಣ ಅವರ ಎದುರೇ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿದ್ದು, ಪಟಾಕಿಯ ಕಿಡಿಗಳು ಅವರ ಮೇಲೂ ಬಿದ್ದಿವೆ. ಕ್ಷಣಕಾಲ ಶಿವರಾಜ್‌ಕುಮಾರ್ ಆಘಾತಕ್ಕೊಳಗಾದರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಪವರ್ ಫ್ಲ್ಯಾಟ್ ಬ್ಲಾಸ್ಟ್‌ನಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಹಿನ್ನೆಲೆಯಲ್ಲಿ ನೂಕುನುಗ್ಗಲು ಕೂಡ ಉಂಟಾಯಿತು. ಘಟನೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!