ನ.1ರಂದು ವಾಣಿನಗರದಲ್ಲಿ ಹೆತ್ತವರ ಪಾದಪೂಜೆ, ಭಜನಾ ಕಾರ್ಯಾಗಾರ

ಇಳಂತಿಲ:* ವಾಣಿಶ್ರೀ ಭಜನಾ ಮಂಡಳಿ, ಶ್ರೀ ಭಾರತಿ ಮಾತೃ ಮಂಡಳಿ, ಯುವಕ ಮಂಡಳಿ, ವಾಣಿಶ್ರೀ ಗೆಳೆಯರ ಬಳಗ (94-95), ಶ್ರೀ ಕೇಶವ ಶಿಶು ಮಂದಿರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಗುರುವಾಯನಕೆರೆ ಇವರ ಸಹಯೋಗದಲ್ಲಿ ನ.1ರಂದು ಬೆಳಿಗ್ಗೆ 8ಕ್ಕೆ ವಾಣಿನಗರದ ವಾಣಿಶ್ರೀ ಭಜನಾ ಮಂದಿರದಲ್ಲಿ ಹೆತ್ತವರ ಪಾದಪೂಜೆ, ಭಜನಾ ಕಾರ್ಯಾಗಾರ ಹಾಗೂ ಮಾತೃ ಭೋಜನ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ವಾಗ್ಮಿ ದಾಮೋದರ ಶರ್ಮ ಅವರ ನೇತೃತ್ವದಲ್ಲಿ, ಭಜನಾ ಗುರುಗಳಾದ ನಾಗೇಶ್ ಬಿ. ನೆರಿಯ ಹಾಗೂ ಸಂದೇಶ್ ಮದ್ದಡ್ಕ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು ಮತ್ತು ಪೋಷಕರ ನಡುವೆ ಬಾಂಧವ್ಯವನ್ನು ಬಲಪಡಿಸುವುದು ಹಾಗೂ ಭಜನಾ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!