ಸೌಜನ್ಯ ಹೋರಾಟಕ್ಕೆ ನ್ಯಾಯದ ಆಶೀರ್ವಾದ ಮಾಡಿರೋ ಶ್ರೀಗಳ ಫೋಟೋಗಳು ಎಲ್ಲೆಡೆ ವೈರಲ್…. ! ಅಷ್ಟಕ್ಕೂ ಯಾರು ಈ ಗುರುಗಳು… ?

ಮಂಗಳೂರು: ಶ್ರೀ ನಿರ್ಮಲಾನಂದ ಗುರುಗಳು ಚಿನ್ನಯ್ಯನಿಗೆ ಮತ್ತು ಹೋರಾಟಗಾರರಿಗೆ ಒಕ್ಕಲಿಗ ಮಹಾಸಂಸ್ಥಾನದಲ್ಲಿ ಕಾಲಭೈರವ ದರ್ಶನ ನಂತರ ತಮ್ಮ ಪೀಠದಲ್ಲಿ ಕುಳಿತು ಸೌಜನ್ಯ ಹೋರಾಟಕ್ಕೆ ನ್ಯಾಯದ ಆಶೀರ್ವಾದ ಮಾಡಿರೋ ಫೋಟೋಗಳು ಲಭ್ಯವಾಗಿದೆ.


ಸೌಜನ್ಯ ಅತ್ಯಾಚಾರ – ಕೊಲೆ ಅಷ್ಟೇ ಅಲ್ಲ, ಧರ್ಮಸ್ಥಳದಲ್ಲಿ ತಾನು ಅತ್ಯಾಚಾರ ಕೊಲೆಯಾಗಿ ಶವವಾದ ಅನೇಕ ದೇಹಗಳನ್ನು ಅಕ್ರಮವಾಗಿ ಹೂತು ಹಾಕಿದ ವಿವರಗಳನ್ನು ಚಿನ್ನಯ್ಯ ಸ್ವತಃ ನಿರ್ಮಲಾನಂದ ಶ್ರೀಗಳ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಾಗ ದಂಗಾಗಿ ಹೋಗಿದ್ದರು. ಮೃತ ಸೌಜನ್ಯ ಒಕ್ಕಲಿಗ ಹೆಣ್ಣು ಮಗು, ಅವಳಿಗಷ್ಟೇ ಅಲ್ಲ. ಎಲ್ಲಾ ಸಮಾಜದ ಅಮಾಯಕ ಜೀವಿಗಳಿಗೂ ನ್ಯಾಯ ಸಿಗಬೇಕು. ನಿಮ್ಮ ಹೋರಾಟದ ಜೊತೆಗೆ ನಾವಿದ್ದೇವೆ. ಅಲ್ಲದೇ ನಾಳೆಯೇ ಸಿಎಂ ರನ್ನು ಭೇಟಿಯಾಗಲಿದ್ದೇನೆ ಮತ್ತು ಅವರಿಗೆ ಈ ವಿಷಯ ತಿಳಿಸಿ ನೊಂದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಕಾಲಭೈರವ ನಿಮ್ಮ ರಕ್ಷಣೆಗೆ ಇದ್ದಾನೆ, ಧೈರ್ಯವಾಗಿರಿ ಎಂದು ಅಭಯಹಸ್ತ ನೀಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!