ವಿಶ್ವ ಆರೋಗ್ಯ ದಿನಾಚರಣೆ: ಇಂಡಿಯಾನಾ ಆಸ್ಪತ್ರೆಯ ವಿಶೇಷ ಆಫರ್ – ಗೋಲ್ಡ್ ಕಾರ್ಡ್ ₹99ಕ್ಕೆ, ಸಿಲ್ವರ್ ಕಾರ್ಡ್ ಉಚಿತ!

ಮಂಗಳೂರು:ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಇಂಡಿಯಾನಾ ಆಸ್ಪತ್ರೆಯು ಏಪ್ರಿಲ್ 8 ರಿಂದ 14 ರವರೆಗೆ ರೂ. 399/-ಬೆಲೆಯ ಇಂಡಿಯಾನಾ ಆರೋಗ್ಯ ಗೋಲ್ಡ್ ಕಾರ್ಡ್ ನ್ನು ರೂ. 99ಕ್ಕೂ ಹಾಗೂ ಹೆಚ್ಚುವರಿಯಾಗಿ ಏಪ್ರಿಲ್ 7 ರ ಎಲ್ಲಾ ಹೊರರೋಗಿಗಳು ಮತ್ತು ಒಳರೋಗಿಗಳಿಗೆ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತಿದೆ ಎಂದು ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ತಿಳಿಸಿದರು .

ಅವರು ನಗರದ ಇಂಡಿಯಾನ ಆಸ್ಪತ್ರೆಯ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಡ್ ಹಲವಾರು ರಿಯಾಯಿತಿಯನ್ನು ಹೊಂದಿದ್ದು ರೋಗಿಗಳು ಇನ್-ಹೌಸ್ ವೈದ್ಯರ ಸಮಾಲೋಚನೆ ಶುಲ್ಕಗಳು ಮತ್ತು ಒಪಿ ಕಾರ್ಯವಿಧಾನಗಳಲ್ಲಿ ಶೇ. 20 ರಷ್ಟು ರಿಯಾಯಿತಿ, ಇನ್-ಹೌಸ್ ಪ್ರಯೋಗಾಲಯ ಮತ್ತು ರೇಡಿಯಾಲಜಿ ಸೇವೆಗಳಲ್ಲಿ ಶೇ. 15 ರಷ್ಟು ರಿಯಾಯಿತಿ, ವೈದ್ಯರ ಶುಲ್ಕಗಳು, ಔಷಧಿಗಳು ಮತ್ತು ಉಪಭೋಗ್ಯ ವಸ್ತುಗಳನ್ನು ಹೊರತುಪಡಿಸಿ ಐ.ಪಿ ಸೇವೆಗಳಲ್ಲಿ ಶೇ. 10 ರಷ್ಟು ರಿಯಾಯಿತಿ ಮತ್ತು ಒ.ಪಿ ಔಷಧಿ ಶುಲ್ಕಗಳಲ್ಲಿ ಶೇ. 5 ರಷ್ಟು ರಿಯಾಯಿತಿಯನ್ನು ಇದು ಹೊಂದಿದೆ ಎಂದರು .

ಇಂಡಿಯಾನಾ ಆಸ್ಪತ್ರೆಯ ನಿರ್ದೇಶಕ ಡಾ. ನಿಹಾಲ್ ಅಲಿ ಕುಂಬ್ಳೆ ಮಾತನಾಡಿ , ಆರೋಗ್ಯದ ಕಾಳಜಿ ನಮ್ಮಲ್ಲಿ ಅಗತ್ಯವಾಗಿ ಬೇಕಾಗುತ್ತದೆ . ವಿಶ್ವ ಅರೋಗ್ಯ ಸಂಸ್ಥೆಯು ಅದನ್ನೇ ಪ್ರತಿಪಾದಿಸುತ್ತದೆ . ಇಂಡಿಯಾನಾ ಆಸ್ಪತ್ರೆಯು ಅರೋಗ್ಯ ಸಮಾಜದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ . . ಇಂಡಿಯಾನಾ ಆಸ್ಪತ್ರೆ ಕೈಗೆಟುಕುವ ವೆಚ್ಚದಲ್ಲಿ ಸಹಾನುಭೂತಿಯ ಆರೈಕೆ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು .

ಮೂರು ರಾಷ್ಟ್ರೀಯ ಹೆದ್ದಾರಿಗಳ ಸಂಗಮದಲ್ಲಿ ನೆಲೆಗೊಂಡಿರುವ NABH-ಮಾನ್ಯತೆ ಪಡೆದ, 300 ಹಾಸಿಗೆಗಳ ಇಂಡಿಯಾನಾ ಆಸ್ಪತ್ರೆಯು ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳನ್ನು ಹೊಂದಿರುವ ಆಸ್ಪತ್ರೆಯಾಗಿದೆ. ಇಂಡಿಯಾನಾ ಆಸ್ಪತ್ರೆಯು 25 ಕ್ಕೂ ಹೆಚ್ಚು ಸೂಪರ್-ಸ್ಪೆಷಾಲಿಟಿ ಮತ್ತು ಸ್ಪೆಷಾಲಿಟಿ ವಿಭಾಗಗಳಲ್ಲಿ ಸಮಗ್ರ ರೋಗನಿರ್ಣಯ ಮತ್ತು ಚಿಕಿತ್ಸಾ ಸೇವೆಗಳನ್ನು ನೀಡುತ್ತದೆ, ಇದು ಗುಣಮಟ್ಟದ ಆರೋಗ್ಯ ರಕ್ಷಣೆಗಾಗಿ ಒಂದೇ ಸೂರಿನಡಿ ಎಲ್ಲ ಸೇವೆಗಳನ್ನು ಒದಗಿಸುವ ಕೇಂದ್ರವಾಗಿದೆ ಎಂದರು .ಇದೇ ಸಂದರ್ಭದಲ್ಲಿ ಗೋಲ್ಡ್ ಕಾರ್ಡ್ನ ಬಿಡುಗಡೆ ಕಾರ್ಯ ನಡೆಯಿತು .

ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಅಪೂರ್ವ ಶ್ರೀಜಯದೇವ , ಕನ್ಸಲ್ಟೆಂಟ್ ಫಿಸಿಶಿಯನ್, ಇಂಟೆನ್ಸಿವಿಸ್ಟ್, ಡಯಾಬಿಟಾಲಜಿಸ್ಟ್ ಡಾ. ಆದಿತ್ಯ ಭಾರದ್ವಾಜ್ , ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಇ. ವಿಜಯ್ ಚಂದ್ರ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!