ಬಂಟ್ವಾಳದಲ್ಲಿ ‘ಬಂಟ್ವಾಳ ನೈಟ್ಸ್ 2k26’ ಸ್ಟಾರ್ ನೈಟ್: ಎಕ್ಸ್ ಟ್ರೀಮ್ ಡ್ಯಾನ್ಸ್ ಕ್ರೂವ್‌ನಿಂದ ಏಪ್ರಿಲ್ 18ರಂದು ಭವ್ಯ ಕಾರ್ಯಕ್ರಮ

ಬಂಟ್ವಾಳ: ಕಳೆದ 15 ವರ್ಷಗಳಿಂದ ಡ್ಯಾನ್ಸ್ ಟೀಮ್ ಮೂಲಕ ಪ್ರಸಿದ್ಧಿಯಾದ ಎಕ್ಸ್ ಟ್ರೀಮ್ ಡ್ಯಾನ್ಸ್ ಕ್ರೂವ್ ಬಿಸಿರೋಡು ಇವರ ವತಿಯಿಂದ ಬಂಟ್ವಾಳ ನೈಟ್ಸ್ 2 ಕೆ 26 ಸ್ಟಾರ್ ನೈಟ್ಸ್ ಮತ್ತು ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಎ. 18 ರಂದು ಬಂಟ್ವಾಳದ ದೇವರಕಟ್ಟೆ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿನೋದ್ ರಾಜ್ ತಿಳಿಸಿದ್ದಾರೆ.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಡ್ಯಾನ್ಸ್ ತರಬೇತಿ ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಸುತ್ತಾ ಬಂದಿದ್ದೇವೆ.ಆದರೆ ಈ ವರ್ಷ ಒಂದು ಚೂರು ಬದಲಾವಣೆಯೊಂದಿಗೆ ಮತ್ತು ಸಂಸ್ಥೆಯ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಸೃಷ್ಟಿಸುವ ಹೊಸ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.


ಈ ಕಾರ್ಯಕ್ರಮವನ್ನು ಬೆಂಜನಪದವು ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ವಿಜಯ್ ಕುಮಾರ್ ಉದ್ಘಾಟಿಸುವರು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪೂರ್ಣಿಮಾ ಶೆಟ್ಟಿ, ದಿವ್ಯಾ, ತೇಜಾಕ್ಷ, ಅರ್ಚನಾ ಇರಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!