ಮಂಗಳೂರು-ಉಡುಪಿ ಭೋವಿ ಸಮಸ್ಯೆಗಳಿಗೆ ಪವನ್ ಕುಮಾರ್ ಶಿರ್ವ ಹೋರಾಟದ ಘೋಷಣೆ

ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೋವಿ ಸಮುದಾಯಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಭೋವಿ ಯುವ ಮುಖಂಡ ಪವನ್ ಕುಮಾರ್ ಶಿರ್ವ ಹೋರಾಟದ ನಿಲುವು ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅವರು ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಬೇಕಾಗಿದ್ದರೂ, ಕಾರಣಾಂತರಗಳಿಂದ ಆ ಪ್ರವಾಸ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಇದೀಗ ಅಧ್ಯಕ್ಷರೊಂದಿಗೆ ಸಮಯ ನಿಗದಿಯಾಗಿರುವ ಹಿನ್ನೆಲೆ, ಪವನ್ ಕುಮಾರ್ ಶಿರ್ವ ಅವರು ನಾಳೆ ಬೆಂಗಳೂರಿನಲ್ಲಿ ಎಂ. ರಾಮಪ್ಪ ಅವರನ್ನು ಭೇಟಿ ಮಾಡಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಮುಂದಿನ ಹೋರಾಟದ ರೂಪುರೇಷೆಗಳು ಹಾಗೂ ನಿಗಮದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ವೇಳೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!