ಮಂಗಳೂರು ದಕ್ಷಿಣ ಪೊಲೀಸರು ಹಲವಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಹಮದ್ ಅಶ್ರಫ್ ಅಲಿಯಾಸ್ ಅಜ್ಜು ಅಲಿಯಾಸ್ ಸಮೀರ್ ಎಂದು ಗುರುತಿಸಲಾಗಿದ್ದು, ಅವರು ಬೆಳ್ತಂಗಡಿ ತಾಲೂಕಿನ ಅಜಿಲಮೊಗರು ಮಾವಿನಕಟ್ಟೆ ನಿವಾಸಿಯಾಗಿದ್ದಾರೆ.
ಆರೋಪಿಯನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಅಶ್ರಫ್ ವಿರುದ್ಧ ಪಾಂಡೇಶ್ವರ, ಸುರತ್ಕಲ್, ಬಂಟ್ವಾಳ, ಉಪ್ಪಿನಂಗಡಿ ಹಾಗೂ ಪುತ್ತೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ದರೋಡೆ ಹಾಗೂ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.