ಉಪ್ಪಳ : ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳ ಹಾಗೂ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರವು ಯಶಸ್ವಿಯಾಗಿ ಮುಂದುವರಿಯುತ್ತಿದೆ.



ಜುಲೈ 2 ರಂದು ಆರಂಭಗೊಂಡ ಉಪ್ಪಳದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಥೆರಪಿಯ ಪ್ರಯೋಜನ ಪಡೆದರು.

ತರುವಾಯ ಇಂದು ಮಾಹಿತಿ ಶಿಬಿರವನ್ನು ಗುರುಸ್ವಾಮಿಗಳಾದ ಶ್ರೀ ಕುಟ್ಟಿಕೃಷ್ಣ ಸ್ವಾಮಿ ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಉಪ್ಪಳದ ಗೌರವಾಧ್ಯಕ್ಷ ಶ್ರೀ ಯು. ಎಂ. ಭಾಸ್ಕರ ,ಶ್ರೀ ಅಯ್ಯಪ್ಪ ಸೇವಾ ಸಮಿತಿ ಉಪ್ಪಳದ ಕಾರ್ಯದರ್ಶಿ ಶ್ರೀ ಶಿವಾನಂದ ಯು, ಮುಸ್ತಾಫಾ ಕಡಂಬಾರ್ , ಕಂಪೂನಿಯ ಸಂಸ್ಥೆಯ ಮುಖ್ಯಸ್ಥರಾದ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.

ಬಳಿಕ ಶಿಬಿರದಲ್ಲಿ ಮಧುಮೇಹ (ಶುಗರ್), ಗ್ಯಾಸ್ಟ್ರಿಕ್, ಥೈರಾಯ್ಡ್ ಸಮಸ್ಯೆ, ವೆರಿಕೋಸ್ ವೇನ್ಸ್, ಮಂಡಿನೋವು, ಕಾಲುನೋವು, ಸೊಂಟನೋವು, ಸರ್ವಿಕಲ್ ಸ್ಪಾಂಡಿಲೈಟಿಸ್, ಅಸ್ತಮಾ, ಕಣ್ಣು ಹಾಗೂ ಕಿವಿ ಸಂಬಂಧಿತ ತೊಂದರೆಗಳು, ಸೊರಿಯಾಸಿಸ್ ಸೇರಿದಂತೆ ಚರ್ಮದ ಸಮಸ್ಯೆಗಳು, ತೂಕ ಇಳಿಕೆ, ಅರ್ಧತಲೆನೋವು, ಪಾದದಲ್ಲಿ ಉರಿ ಮತ್ತು ನೋವು, ಕಾಲು ಹಾಗೂ ಮೈ ಜೋಮು, ಕಾಲು ಮತ್ತು ಮೈ ಬಾವು, ಆನೆಕಾಲು ರೋಗ, ನಿದ್ರಾಹೀನತೆ, ಸಯಾಟಿಕಾ, ಪಾರ್ಶ್ವವಾಯು (ಸ್ಟ್ರೋಕ್) ನಂತರದ ಪುನರ್ವಸತಿ, ದೇಹದ ಸಮತೋಲನ ಸಮಸ್ಯೆ, ಮಹಿಳೆಯರ ಮಾಸಿಕ ಸಮಸ್ಯೆಗಳು, ಸುಟ್ಟ ಗಾಯದ ಕಲೆಗಳು, ಆರ್ಥ್ರೈಟಿಸ್, ಕೀಲುನೋವು ಹಾಗೂ ರಕ್ತಹೀನತೆ (ಅನಿಮಿಯಾ) ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಮಾರ್ಗದರ್ಶನ್ನು ಕಂಪೂನಿಯ ಸಂಸ್ಥೆಯ ಮುಖ್ಯಸ್ಥರಾದ ಸೀತಾರಾಮ ಶೆಟ್ಟಿ ತಿಳಿಸಿದರು .

ಶಿಬಿರದಲ್ಲಿ ಭಾಗವಹಿಸಿದ ಹಲವರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡಿರುವುದಾಗಿ ತಿಳಿಸಿದರು. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲಾ ದಾನಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮವನ್ನು ನೆಮ್ಮದಿ ವೆಲ್ನೆಸ್ ಸೆಂಟರ್, ಪುತ್ತೂರಿನ ಮಾಲಕರಾದ ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಅವರು ನಿರ್ವಹಿಸಿದರು .

