ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ವಾಕ್ ಫಾರ್ ದಿ ನೇಷನ್’ ವಾಕಥಾನ್

ಭಾರತ ಸ್ವಾತಂತ್ರ್ಯೋತ್ಸವ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯು ಪ್ರಮುಖವಾದ ಪಾತ್ರವನ್ನು ವಹಿಸಿತ್ತು . ಇದನ್ನು ನೆನೆಯುವ ನಿಟ್ಟಿನಲ್ಲಿ ದಿಶಾ ಭಾರತ್ ಹಾಗೂ ವಿವಿಧ ರಾಷ್ಟ್ರಭಕ್ತ ಸಂಘಟನೆಗಳ ಆಶ್ರಯದಲ್ಲಿ ‘ವಾಕ್ ಫಾರ್ ದಿ ನೇಷನ್’ ವಾಕಥಾನ್ ಕಾರ್ಯಕ್ರಮವು ಶನಿವಾರ ಬೆಳಗ್ಗೆ ಮಂಗಳೂರಿನಲ್ಲಿ ನಡೆಯಿತು.

ಕೆನರಾ ಕಾಲೇಜು (ಸ್ವಾಯತ್ತ), ಜೈಲ್ ರೋಡ್‌ನಿಂದ ಆರಂಭಗೊಂಡ ವಾಕಥಾನ್ ಟಿ.ವಿ. ರಮಣ ಪೈ ಹಾಲ್‌ವರೆಗೆ ಸಾಗಿತು. ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

“ರಾಷ್ಟ್ರಕ್ಕಾಗಿ ನಡಿಗೆ – ಇದು ಕೇವಲ ನಡಿಗೆಯಲ್ಲ, ಏಕತೆಯ ಚಳವಳಿ. ವಿಭಜಿಸಲು ಅಲ್ಲ, ದೇಶವನ್ನು ಕಟ್ಟಲು.”’ ಎಂಬ ಸಂದೇಶದೊಂದಿಗೆ ನಡೆದ ವಾಕಥಾನ್‌ನಲ್ಲಿ ರಾಷ್ಟ್ರದ ಏಕತೆ, ಸಾಮರಸ್ಯ ಹಾಗೂ ದೇಶ ನಿರ್ಮಾಣದ ಮಹತ್ವವನ್ನು ಸಾರಲಾಯಿತು.

ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಏಕತೆಯ ಸಂದೇಶವನ್ನು ಹೊತ್ತು ವಾಕಥಾನ್‌ನಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!