ಎಸ್‌ಐಆರ್ ಪ್ರಕ್ರಿಯೆಯ ವೇಳೆ ಹೆಸರು ತಾಳೆಯಾಗದ ಕಾರಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ಜಾರಿಗೊಳಿಸಿದ್ದನ್ನು ಚುನಾವಣಾ ಆಯೋಗವು ವಾಪಸ್ ಪಡೆದಿದೆ.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸೂಕ್ತ ದಾಖಲೆಯೊಂದಿಗೆ ಸೆಪ್ಟೆಂಬರ್ 11ರಂದು ಹಾಜರಾಗಲು ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದರ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜಬ್ಬರ ಮನೆಗೆ ಹೋಗಿ ಸದ್ಯ ನೋಟಿಸ್ ವಾಪಸ್ ಕೊಡಿ, ಪರಿಶೀಲಿಸಿ ಹೇಳುತ್ತೇವೆ ಎಂದು ನೋಟಿಸ್ ಪ್ರತಿ ಕೊಂಡು ಹೋಗಿದ್ದಾರೆ. ಅವರು ಮುಂದೇನು ಮಾಡುತ್ತಾರೆ ಅಂತ ಹಾಜಬ್ಬರಿಗೆ ಗೊತ್ತಿಲ್ಲ. 2002 ರಲ್ಲಿ ಹಾಜಬ್ಬ ಅಂತಾ ದಾಖಲೆಗಳಲ್ಲಿ ಇದ್ರೆ 2004ರ ಬಳಿಕದ ಎಲ್ಲಾ ದಾಖಲೆಗಳಲ್ಲಿ ಹರೇಕಳ ಹಾಜಬ್ಬ ಎಂದೇ ನಮೂದಿಸಲಾಗಿತ್ತು.


