ಮಂಗಳೂರು, ಸೆ. 16:* ವಿಶ್ವ ಹೃದಯ ದಿನದ ಅಂಗವಾಗಿ ನಗರದ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಸಾರ್ವಜನಿಕರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಸಂಪೂರ್ಣ ಹೃದಯ ತಪಾಸಣಾ ಪ್ಯಾಕೇಜ್ ಘೋಷಿಸಿದೆ.

ಸಾಮಾನ್ಯವಾಗಿ ₹3,000 ಮೌಲ್ಯದ ಈ ತಪಾಸಣಾ ಪ್ಯಾಕೇಜ್‌ನ್ನು ಇದೀಗ ಕೇವಲ ₹1,499ಕ್ಕೆ ನೀಡಲಾಗುತ್ತಿದ್ದು, ಈ ವಿಶೇಷ ಕೊಡುಗೆ ಸೆಪ್ಟೆಂಬರ್ 30, 2026ರವರೆಗೆ ಲಭ್ಯವಿರಲಿದೆ.
ಪ್ಯಾಕೇಜ್‌ನಲ್ಲಿ ECHO/TMT, ಲಿಪಿಡ್ ಪ್ರೊಫೈಲ್, ಕ್ರಿಯೇಟಿನೈನ್, ರಾಂಡಮ್ ಬ್ಲಡ್ ಶುಗರ್ (RBS) ಹಾಗೂ ECG ಪರೀಕ್ಷೆಗಳು, ಆಹಾರ ಪದ್ಧತಿ ಕುರಿತು ತಜ್ಞರ ಸಲಹೆ ಮತ್ತು ಅನುಭವಿ ಹೃದ್ರೋಗ ತಜ್ಞರೊಂದಿಗೆ ಸಮಾಲೋಚನೆ ಒಳಗೊಂಡಿದೆ.

ಜಡ ಜೀವನಶೈಲಿ, ನಿದ್ರಾಹೀನತೆ, ನಿರಂತರ ಒತ್ತಡ, ಧೂಮಪಾನ, ಮದ್ಯಪಾನ ಹಾಗೂ ಫಾಸ್ಟ್‌ಫುಡ್ ಸೇವನೆ ಸೇರಿದಂತೆ ವಿವಿಧ ಜೀವನಶೈಲಿ ಕಾರಣಗಳಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು ಹಾಗೂ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಇರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಆಸ್ಪತ್ರೆ ಸಲಹೆ ನೀಡಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಹಾಗೂ ಮುನ್ನೆಚ್ಚರಿಕೆಯ ಆರೈಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ತಪಾಸಣೆಗೆ ಮುಂಗಡ ಕಾಯ್ದಿರಿಸಲು: 72590 16560

