ಹೈರಾಕ್ಸ್ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ವಿನೂತನ ಸಾಧನೆ

ಮಂಗಳೂರು:ಆಡಳಿತಾತ್ಮಕ ಜವಾಬ್ದಾರಿಗಳ ಒತ್ತಡದ ನಡುವೆಯೂ ದೈಹಿಕ ಕ್ಷಮತೆಗೆ ಆದ್ಯತೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಮುಂಬೈನಲ್ಲಿ ನಡೆದ ‘ಹೈರಾಕ್ಸ್ 2026’ ಅಂತಾರಾಷ್ಟ್ರೀಯ ಫಿಟ್‌ನೆಸ್ ಸ್ಪರ್ಧೆಯ ಮೆನ್ಸ್ ಡಬಲ್ಸ್ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಸೆಪ್ಟೆಂಬರ್ 20ರಂದು ನಡೆದ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಹಾಗೂ ಮಂಗಳೂರಿನ ಕಶಾರ್ಪ್ ಫಿಟ್‌ನೆಸ್‌ನ ಜನರಲ್ ಮ್ಯಾನೇಜರ್ ಮತ್ತು ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರ ಜೋಡಿ 1 ಗಂಟೆ 39 ನಿಮಿಷ 09 ಸೆಕೆಂಡ್‌ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದೆ.

ಹೈರಾಕ್ಸ್ ಸ್ಪರ್ಧೆಯಲ್ಲಿ ಓಟದ ಜತೆಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಎಂಟು ಕಠಿಣ ಫಿಟ್‌ನೆಸ್ ಕಸರತ್ತುಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಆಡಳಿತದ ಬಿಡುವಿಲ್ಲದ ಒತ್ತಡದ ನಡುವೆಯೂ ಇಂತಹ ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಜಿಲ್ಲಾಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಆರೋಗ್ಯ ಮತ್ತು ದೈಹಿಕ ಕ್ಷಮತೆ ಪ್ರತಿಯೊಬ್ಬರ ಜೀವನಶೈಲಿಯ ಪ್ರಮುಖ ಭಾಗವಾಗಬೇಕು ಎಂಬ ಸಂದೇಶವನ್ನು ದರ್ಶನ್ ಹೆಚ್.ವಿ. ಅವರು ತಮ್ಮ ಸಾಧನೆಯ ಮೂಲಕ ಸಾರಿದ್ದಾರೆ.

SHARE
Loading spinner

One thought on “ಹೈರಾಕ್ಸ್ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ವಿನೂತನ ಸಾಧನೆ”

Leave a Reply

Your email address will not be published. Required fields are marked *

error: Content is protected !!