ಈ ಸಮಾಜ ವಿಪ್ರರಿಗೆ ವಿಶಿಷ್ಠ ಸ್ಥಾನವನ್ನು ನೀಡಿದೆ. ಧರ್ಮ- ಶಾಸ್ತ್ರಗಳ ಸೂಕ್ಷ್ಮವನ್ನರಿತುಕೊಂಡು ಆದರ್ಶ ಬದುಕನ್ನು ಬಾಳುವುದರಿಂದಲೇ ನಮ್ಮ ವಿದ್ವತ್ ನಮಗೆ ಉತ್ತಮಿಕೆಯ ಸ್ಥಾನವನ್ನು ನೀಡಿದೆ. ಸಮಾಜದಲ್ಲಿ ನಾವು ಅಲ್ಪಸಂಖ್ಯಾತರಲ್ಲ. ಬಹುಸಂಖ್ಯೆಯಲ್ಲಿದ್ದುಕೊಂಡು ಒಗ್ಗಟ್ಟನ್ನು ಸಾಧಿಸಿಕೊಂಡು ಮುನ್ನುಗ್ಗಿದರೆ ಮಾತ್ರ ವಿಪ್ರ ರಾಗಿ ನಾವು ಮನೆಮನೆಯನ್ನು ತಲುಪಲು ಸಾಧ್ಯವಾಗುತ್ತದೆ. ಈ ಪರಿಸರದ ಪ್ರತೀ ಮನೆಯೂ ವಿಪ್ರ ಮನೆಯಾಗಲಿ” ಎಂದು ಲೆಕ್ಕ ಪರಿಶೋಧಕರಾದ ಶ್ರೀ ಸುರೇಶ ಉಡುಪರು ಕೋಡಿಕಲ್ ನ ವಿಪ್ರ ವೇದಿಕೆಯ ಕಾರ್ಯಕ್ರಮದಲ್ಲಿ ಹೇಳಿದರು.


ಈ ತಿಂಗಳ ಕಾರ್ಯಕ್ರಮವು ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರ ನೇತೃತ್ವದ ಸರಯೂ ಸಭಾಭವನದಲ್ಲಿನಡೆಯಿತು. ಕಾರ್ಯಕ್ರಮವು ರಸಪ್ರಶ್ನೆಯ ವಿಶಿಷ್ಟ ಸಂಯೋಜನೆಯಲ್ಲಿ ಮೂಡಿ ಬಂತು. ಪ್ರಕಾರ್ಯದರ್ಶಿ ಶ್ರೀದುರ್ಗಾದಾಸ್ ಕಟೀಲ್ ರವರು ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ರಾಮ ಭಟ್, ಕೃಷ್ಣ ಪ್ರಸಾದ ರಾವ್, ತೆಕ್ಕೆಕೆರೆ ವಿಶ್ವೇಶ್ವರ ಭಟ್, ಸಂಪತ್ ಕುಮಾರ್ ಭಟ್, ಶ್ರೀಮತಿ ಪ್ರಭಾವತಿ ಮಡಿ, ರಜನಿ ಉಡುಪ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ವಿದ್ಯಾಗಣೇಶ್ ರಾವ್ ರವರು ಪ್ರಾಯೋಜಕರನ್ನು ಗೌರವಿಸಿದರು. ಶ್ರೀಮತಿ ಇಂದಿರಾ ರಾಮ್ ಭಟ್ ರವರು ಧನ್ಯವಾದವಿತ್ತರು.

