ಪುತ್ತೂರು: ನಿತ್ಯಜೀವನದಲ್ಲಿ ತಾಯಂದಿರು ಯೋಗವನ್ನು ಅನುಷ್ಠಾನ ಮಾಡಿದರೆ ಆರೋಗ್ಯವಂತರಾಗುವುದರೊಂದಿಗೆ ಮಾನಸಿಕ ಒತ್ತಡಗಳಿಂದ ಮುಕ್ತರಾಗಬಹುದು ಎಂದು ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಯೋಗರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಶಾಂತಾ ಪುತ್ತೂರು ಹೇಳಿದರು.
ಅವರು ಅಕ್ಟೋಬರ್ 2ರಂದು ಪುತ್ತೂರು ಕಲ್ಲೇಗದ ಭಾರತ ಮಾತಾ ಕಲಾಮಂದಿರದಲ್ಲಿ ಏರ್ಪಡಿಸಲಾದ ಮಾತೃವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪತಂಜಲಿ ಯೋಗಶಿಕ್ಷಣ ಸಮಿತಿ ನೇತ್ರಾವತಿ ವಲಯದ ಪುತ್ತೂರು ಕಲ್ಲೇಗ,ತೆಂಕಿಲ,ಪಾಂಗಳಾಯಿ ಶಾಖೆಗಳ ನೇತೃತ್ವದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು.ಜಿಲ್ಲಾ ಸಹಸಂಚಾಲಕ ಲೋಕೇಶ್ ಮುಖ್ಯಭಾಷಣ ಮಾಡಿ ಮನೆಯಲ್ಲಿ ಆನಂದ ನೆಲೆಸುವುದು ತಾಯಂದಿರ ತ್ಯಾಗದಿಂದ ಮಾತೆಯರನ್ನು ಸಮಾಜ ಗೌರವಿಸುವುದರಿಂದ ಸುಖೀ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಶಿಕ್ಷಕಿ ಅರ್ಚನಾ ಅಧ್ಯಕ್ಷತೆ ವಹಿಸಿದ್ದರು.ಮೇಘನಾ ಸ್ವಾಗತಿಸಿ,ದೀಪಿಕಾ ನಿರೂಪಿಸಿ ಚಂದ್ರಲೇಖ ವಂದಿಸಿದರು.ಮಾತೆಯರು ಭಾರತಮಾತೆಗೆ ಅರ್ಚನೆ ಮಾಡಿ ಮಾತೃಭೋಜನದಲ್ಲಿ ಪಾಲ್ಗೊಂಡರು.


