

ಮಂಗಳೂರು: ಕಾನೂನುಬಾಹಿರ ಕೆಲಸ ಮಾಡುವವರನ್ನು ರಕ್ಷಿಸುವುದು, ಪೊಲೀಸ್ ಠಾಣೆಗೆ ನುಗ್ಗುವುದೇ ಬಿಜೆಪಿ ಸಂಸ್ಕೃತಿ ಎಂದು ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಟೀಕಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫಾರಂ ನಂಬರ್ 7 ದುರುಪಯೋಗಕ್ಕೆ ಸಂಬಂಧಿಸಿ ಪೊಲೀಸರು ಕ್ರಮ ಕೈಗೊಳ್ಳದಂತೆ ಬಿಜೆಪಿ ಮುಖಂಡರು ಎಚ್ಚರಿಕೆ ನೀಡುತ್ತಿದ್ದಾರೆ. ಠಾಣೆಗೆ ನುಗ್ಗುವುದಾಗಿಯೂ ಹೇಳಿದ್ದಾರೆ.
ಜೋಕಟ್ಟೆಯಲ್ಲಿ 66 ಕ್ರೈಸ್ತ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ. ಇಂಥ ಅಕ್ರಮ ನಡೆದಿದ್ದರೆ ಕಾನೂನು ಪ್ರಕಾರ ಒಬ್ಬನೇ ನೈಜ ಮತದಾರನ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತದೆ ಎಂದೂ ಪದ್ಮರಾಜ್ ಹೇಳಿದರು.

ದೊಡ್ಡವರೆಂದು ಹೇಳಿಕೊಳ್ಳುವವರು, ರಾಜ್ಯಭಾರ ಮಾಡಿದವರು ಮಾಡುತ್ತಿರುವ ಕೆಲಸ ಏನು? ನಿಮಗೆ ರಾಜಕೀಯದಲ್ಲಿ ಮುಂದುವರಿಯುವ ನೈತಿಕತೆ ಇದೆಯೇ? ಮಾಜಿ ಮುಖ್ಯಮಂತ್ರಿಯವರೇ ಪೊಲೀಸ್ ಠಾಣೆಗೆ ನುಗ್ಗುವ ಮಾತು ಹೇಳುವುದಾದರೆ ನಿಮಗೆ ಕನಿಷ್ಠ ಜ್ಞಾನ ಇಲ್ಲವೇ? ಎಂದು ಅವರು ಬಿಜೆಪಿ ವಿರುದ್ದ ಹರಿಹಾಯ್ದರು.’


I’ve been playing here for a few weeks now and the payout speed is actually impressive. Highly recommend 777ccgame for anyone looking for a smooth experience.
I was looking for a stable place to get the app and this worked perfectly. The installation was smooth and everything runs great on my device. Check it out at juan365downloadapk