ಗೋಡೆ ಬರಕ್ಕೆ ಹೈಟೆಕ್ ಸ್ಪರ್ಶ ….. !

ಪಾಲಕ್ಕಾಡ್: ಗೋಡೆ ಬರಹ ಅದು ಕಲಾ ಕೃತಿಯ ಒಂದು ಪ್ರಕಾರ ದೇವರ ನಾಡು ಕೇರಳದಲ್ಲಿ ಚುನಾವಣೆಯ ಪ್ರಚಾರಕ್ಕಾಗಿ ಗೋಡೆ ಬರವನ್ನು ಬರೆಯುತ್ತಾರೆ. ವರುಷಗಳು ಉರುಳಿದರು ಇಂದಿಗೂ ಗೋಡೆ ಪ್ರಚಾರ ಜೀವಂತವಾಗಿ ಕೇರಳದಲ್ಲಿ ಇಂದಿಗೂ ಮುಂದುವರಿದು ಕೊಂಡು ಹೋಗುತ್ತಿದೆ .

ತಂತ್ರಜ್ಞಾನವು ಸಕತ್ ಆಗಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ . ಈಗ ಗೋಡೆ ಬರಹಕ್ಕೂ ಆಧುನಿಕ ಸ್ಪರ್ಶವನ್ನು ನೀಡಿ ಗೋಡೆ ಬರಹ ಬರವಣಿಗೆಗೆ ಕೇರಳದಲ್ಲಿ ರೋಬೋಟ್ ಕೂಡಾ ಪಾದಾರ್ಪಣೆ ಮಾಡಿರುವುದು ವಿಶೇಷ .

ಚುವರ್ ಬೋಟ್ ಎಂಬ ರೋಬೋಟ್ ತಂತ್ರಜ್ಞಾನದ ಸಹಾಯದೊಂದಿಗೆ ಆಧುನಿಕ ವಿಧಾನ, ವಿನ್ಯಾಸದಲ್ಲಿ ಗೋಡೆ ಬರಹ ಬರೆಯುತ್ತಿದೆ. ಪ್ರಾಯೋಗಿಕವಾಗಿ ಯುಡಿಎಫ್ ನ ಪಾಲಕ್ಕಾಡ್ ಅಭ್ಯರ್ಥಿ, ಚಿತ್ರ ನಟ ರಮೇಶ್ ಪಿಶಾರಡಿ ಪರವಾಗಿ ರೋಬೋಟ್ ಗೋಡೆ ಬರಹ ಬರೆದಿದ್ದು ಇದು ನೋಡುಗರಲ್ಲಿ ಚಕಿತತೆಯನ್ನು ಉಂಟು ಮಾಡಿರುವುದು ಸತ್ಯ .

ಕೇರಳಾ ಸ್ಮಾರ್ಟಪ್ ಮಿಷನ್ ಆಧೀನದಲ್ಲಿ ಪಾಲಕ್ಕಾಡ್ ಕೇಂದ್ರಿತ ಟೊವೋನೋವಾ ಎಂಬ ಟೆಕ್ ಸಂಸ್ಥೆ “ರೊಬೋಟ್ ” ಮೂಲಕ ಗೋಡೆ ಬರಹ ಬರೆವ ಚುವರ್ ಬೋಟ್ ವಿನ್ಯಾಸಗೊಳಿಸಿದೆ.

ಇದು ಯಾವುದೇ ಭಾಷೆಯಲ್ಲೂ ಬರೆಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಚಿತ್ರವನ್ನೂ ಬಿಡಿಸಲಿದೆ. ಎರಡರಿಂದ ಮೂರು ಮೀಟರ್ ಉದ್ದದ ಗೋಡೆಯಲ್ಲಿ ಕೇವಲ 15-20 ಮಿನಿಟಲ್ಲಿ ವರ್ಣರಂಜಿತ ಭಿತ್ತಿ ಬರಹವನ್ನು ಮೂಡಿಸುವ ಈ ರೋಬೋಟ್ ಜತೆ ಓರ್ವ ಟೆಕ್ನಿಷಿಯನ್ ಹಾಗೂ ಇಬ್ಬರು ನೌಕರರು ಬೇಕಾಗುತ್ತದೆ ,

SHARE
Loading spinner

Leave a Reply

Your email address will not be published. Required fields are marked *

error: Content is protected !!