ಕಾಸರಗೋಡು ಜಿಲ್ಲೆಯ ಆರಿಕ್ಕಾಡಿ ಗ್ರಾಮದ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಕಾಲಾವಧಿ ವಾರ್ಷಿಕ ನೇಮೋತ್ಸವವು ಮಾರ್ಚ್ 26 ಮತ್ತು 27, 2026 ರಂದು ಭಕ್ತಿಭಾವದಿಂದ ನಡೆಯಲಿದೆ.
ದೇವಸ್ಥಾನದ ಪ್ರಕಟಣೆಯ ಪ್ರಕಾರ, ಮಾರ್ಚ್ 26ರಂದು ಗುರುವಾರ ಬೆಳಗ್ಗೆ ಗಣಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ ವೇಳೆಯಲ್ಲಿ ಅಲಂಕಾರ ಪೂಜೆ, ಭಜನೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಬಳಿಕ ಬಂಡಾರ ಏರುವುದು , ರಾತ್ರಿ 8: 30ಕ್ಕೆ ಉಳ್ಳಲ್ತಿ ದೈವದ ನೇಮ ಬಳಿಕ ರಾತ್ರಿ 10:00ಗೆ ಮೈಸಂದಾಯ ಪೊಟ್ಟಲ್ಲಯ , ಎರುಗೋಪಾಲ ದೈವಗಳ ನೇಮ ಹಾಗು ಬೆಳಗ್ಗೆ 2:30ಕ್ಕೆ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ .
ಮಾರ್ಚ್ 27ರಂದು ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆಯಲಿದ್ದು, ಬಳಿಕ ಧರ್ಮಸ್ಥಳ ಅಣ್ಣಪ್ಪ ಪಂಜುರ್ಲಿ ದೈವದ ನೇಮ , 9:00ಗೆ ಧೂಮಾವತಿ ಬಂಟ ದೈವದ ನೇಮ ಮತ್ತು ಒಲಸರಿ ಸೇವೆ ಬಳಿಕ ಭಂಡಾರ ಇಳಿಯುವುದು ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿವೆ. ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ದೇವಸ್ಥಾನದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು ಹಾಗೂ ಆಡಳಿತ ಸಮಿತಿ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.