ಮಂಜೇಶ್ವರ: ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯ ಬೆಳವಣಿಗೆ ಹಲವು ಹಂತಗಳನ್ನು ದಾಟಿ ಇಂದು ಬಲಿಷ್ಠವಾಗುತ್ತಿದೆ. 2001ರಲ್ಲಿ ಕಾಸರಗೋಡು ಜಿಲ್ಲಾ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೇಶದ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಜೇಶ್ವರ ಕ್ಷೇತ್ರದ ಚುನಾವಣಾ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಸಮಯದಲ್ಲಿ ಮಂಜೇಶ್ವರ ಚುನಾವಣಾ ಉಸ್ತುವಾರಿಯಾಗಿ ಕೆ. ಸುರೇಂದ್ರನ್ ಕೂಡ ಕಾರ್ಯನಿರ್ವಹಿಸುತ್ತಿದ್ದರು.
ಆ ಸಭೆ ನಡೆಯುತ್ತಿದ್ದ ವೇಳೆ ನರೇಂದ್ರ ಮೋದಿ ಅವರಿಗೆ ತಕ್ಷಣ ಗುಜರಾತ್ಗೆ ಬರಬೇಕೆಂದು ಕರೆ ಬಂದಿತ್ತು. ಎರಡು ದಿನಗಳ ಬಳಿಕ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಐತಿಹಾಸಿಕ ಘಟನೆ ಸಂಭವಿಸಿತು. ಈ ಘಟನೆಗೂ ತುಳುನಾಡ ಮಣ್ಣಿಗೂ ಇರುವ ಸಂಬಂಧವನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹೆಮ್ಮೆಯಿಂದ ಸ್ಮರಿಸುತ್ತಿದ್ದಾರೆ.