ಉದ್ಯಾವರದಲ್ಲಿ ಜೈ ವೀರ ಮಾರುತಿ ವ್ಯಾಯಾಮಶಾಲೆಯ 31ನೇ ಭಜನೋತ್ಸವ

ಉದ್ಯಾವರ: ಶ್ರೀ ಅರಸು ಮಂಜಿಷ್ಣಾರ್ ಕೃಪಾ ಜೈ ವೀರ ಮಾರುತಿ ವ್ಯಾಯಾಮಶಾಲೆಯ ವತಿಯಿಂದ 31ನೇ ವಾರ್ಷಿಕ ಭಜನೋತ್ಸವವು ಮಾರ್ಚ್ 28 ಮತ್ತು 29ರಂದು ಭಕ್ತಿಭಾವದಿಂದ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಮಾರ್ಚ್ 28ರಂದು ಸಂಜೆ 6:40ಕ್ಕೆ ಶ್ರೀ ಶಂಭು ನಂಬೂದಿರಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಭಕ್ತಿಗೀತೆಗಳೊಂದಿಗೆ ಭಜನೆ ನಡೆಯಲಿದೆ.


ಮಾರ್ಚ್ 29ರಂದು ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಅದೇ ದಿನ ಸಂಜೆ 6:40ಕ್ಕೆ ಭಜನಾ ಮಂಗಳೋತ್ಸವ ಹಾಗೂ ಮಹಾಪೂಜೆ ನಡೆಯಲಿದೆ.
ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಿ ಶಕ್ತಿ ಕಲಾಬಳಗ, ಊರ್ವ ಚಿಲಿಂಬಿ ತಂಡದಿಂದ ಜೋಡು ಜೀಟಿಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ವೀರ ಮಾರುತಿ ದೇವರ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!