ಕಯ್ಯಾರು (ಮೇರ್ಲ): ಶ್ರೀ ಉಳ್ಳಾಲ್ತಿ ಕಾಳಿಚಾಮುಂಡಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ನೇಮೋತ್ಸವವು ಏಪ್ರಿಲ್ 28ರಿಂದ 30ರವರೆಗೆ ಭಕ್ತಿಭಾವದಿಂದ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿರುವ ಈ ಮಹೋತ್ಸವವು ಊರ-ಪರವೂರ ಹಾಗೂ ಹತ್ತು ಸಮಸ್ತರು ಮತ್ತು ಕುಟುಂಬಸ್ಥರ ಸಹಕಾರದಿಂದ ಜರುಗಲಿದೆ.
ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶಂಕರನಾರಾಯಣ ಕಡಮಣ್ಣಾಯ (ಬಂಬ್ರಾಣ ಬೂಡು, ಕರ್ಕುಳ) ಅವರ ದಿವ್ಯ ಹಸ್ತದಿಂದ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಈ ನಡುವೆ ದೈವಸ್ಥಾನದಲ್ಲಿ ಭಾನುವಾರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬ್ರಹ್ಮಕಲಶೋತ್ಸವದ ಗೌರವ ಅಧ್ಯಕ್ಷರಾದ ರಾಮಣ್ಣ ಅತ್ತಾರ್ ಹೊಸಮನೆ ಹಾಗೂ ಸಮಿತಿಯ ಕಾರ್ಯದರ್ಶಿ ಹರ್ಷಿತ್ ಕರ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿದ್ದು, ಕುಟುಂಬಸ್ಥರು ಹಾಗೂ ಸಮಸ್ತರು ಭಾಗವಹಿಸಿದರು.