ಪೆರ್ಲ ಪೇಟೆಯಲ್ಲಿ ಬಿಜೆಪಿ ಭರ್ಜರಿ ರೋಡ್ ಶೋ: ಕೆ. ಸುರೇಂದ್ರನ್ ಪರ ಅಣ್ಣಾಮಲೈ ಪ್ರಚಾರ

ಪೆರ್ಲ (ಮಂಜೇಶ್ವರ):
ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಬಹಿರಂಗ ಪ್ರಚಾರದ ಅಂತಿಮ ದಿನದ ಅಂಗವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಪೆರ್ಲ ಪೇಟೆಯಲ್ಲಿ ಭರ್ಜರಿ ರೋಡ್ ಶೋ ನಡೆಯಿತು.

ಶ್ರೀಮಾತಾ ಆರ್ಕೇಡ್ ಚೆಕ್ ಪೋಸ್ಟ್ ಪ್ರದೇಶದಿಂದ ಆರಂಭವಾದ ಮೆರವಣಿಗೆ ಪೆರ್ಲದ ಪ್ರಮುಖ ರಾಜ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ಈ ರೋಡ್ ಶೋಗೆ ಮುಖ್ಯ ಅತಿಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಮಲೈ, ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಪರವಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮತಯಾಚನೆ ನಡೆಸಿದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಪಕ್ಷವು ಶಕ್ತಿಯುತ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದು, ಈ ರೋಡ್ ಶೋ ಪ್ರಮುಖವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿ ರೋಡ್ ಶೋಗೆ ಬೆಂಬಲ ಸೂಚಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!