ಕಾಸರಗೋಡಿನಲ್ಲಿ ಎನ್‌ಡಿಎ ಭರ್ಜರಿ ರೋಡ್ ಶೋ: ಕಾರ್ಯಕರ್ತರಿಂದ ಉತ್ಸಾಹಭರಿತ ಮತಯಾಚನೆ

ಕಾಸರಗೋಡು:
ನಗರವನ್ನು ಕಂಗೊಳಿಸುತ್ತಾ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದಂತೆ, ಕಾಸರಗೋಡು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಅವರ ಪರವಾಗಿ ಭರ್ಜರಿ ರೋಡ್ ಶೋ ಹಾಗೂ ಕೊಟ್ಟಿಕಲಾಶ ಕಾರ್ಯಕ್ರಮವು ಕಾರ್ಯಕರ್ತರ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ನಡೆಯಿತು.

ಕಾಸರಗೋಡು ತಾಳಿಪಡ್ಪು ಮೈದಾನದಿಂದ ಆರಂಭವಾದ ರೋಡ್ ಶೋನಲ್ಲಿ ಅಭ್ಯರ್ಥಿಯ ಪ್ಲಕಾರ್ಡ್‌ಗಳು ಹಾಗೂ ಪಕ್ಷದ ಧ್ವಜಗಳನ್ನು ಹಿಡಿದು ನೂರಾರು ಕಾರ್ಯಕರ್ತರು ಭಾಗವಹಿಸಿದರು.

ಈ ರೋಡ್ ಶೋನಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪನ್‌ವೆಲ್ ಶಾಸಕ ಪ್ರಶಾಂತ್ ಠಾಕೂರ್, ಸಿನೆಮಾ ನಟಿ ಲಕ್ಷ್ಮಿ ಪ್ರಿಯಾ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು.

ಇದೇ ವೇಳೆ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಚುನಾವಣಾ ಅಂತಿಮ ಹಂತದಲ್ಲಿ ನಡೆದ ಈ ರೋಡ್ ಶೋ ಮೂಲಕ ಮತದಾರರಲ್ಲಿ ಗಮನಾರ್ಹ ಉತ್ಸಾಹ ಸೃಷ್ಟಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!