ಮಂಜೇಶ್ವರ (ಕಯ್ಯಾರು):
ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಸ್ಥಾನ, ಪರಂಬಳ, ಕಯ್ಯಾರುವಿನಲ್ಲಿ ಶ್ರೀ ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗೋಂದೋಳು ಪೂಜಾ ಮಹೋತ್ಸವವನ್ನು ಏಪ್ರಿಲ್ 9 ಮತ್ತು 10ರಂದು ಭಕ್ತಿಭಾವದಿಂದ ನಡೆಸಲು ನಿರ್ಧರಿಸಲಾಗಿದೆ.
ಏಪ್ರಿಲ್ 9ರಂದು ಗಣಹೋಮ, ನಾಗಾರಾಧನೆ ಹಾಗೂ ಪರಿವಾರ ದೈವಗಳ ಆರಾಧನೆ ನಡೆಯಲಿದ್ದು, ಏಪ್ರಿಲ್ 10ರಂದು ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಮತ್ತು ಗೋಂದೋಳು ಪೂಜಾ ಮಹೋತ್ಸವವು ವಿಧಿವತ್ತಾಗಿ ಜರುಗಲಿದೆ.
ಈ ಮಹೋತ್ಸವವನ್ನು ಊರ ಮತ್ತು ಪರವೂರ ಸಮಾಜ ಬಾಂಧವರು ಹಾಗೂ ಭಕ್ತರ ಸಹಕಾರದೊಂದಿಗೆ ವರ್ಷಂಪ್ರತಿಯಂತೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.
ಭಕ್ತರು ತಮ್ಮ ಬಂಧು-ಮಿತ್ರರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ಸಿರಿಮುಡಿ ಕುಂಕುಮ ಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ವಿನಂತಿಸಿದೆ.