ಶ್ರೀ ಚೌಕರು ಗುಳಿಗ, ಶ್ರೀ ಕೊರಗ ತನಿಯ ಸನ್ನಿದಿ ದೊಡ್ಡ ಹಿತ್ತಿಲು ಮಠ ಮೊಗ್ರಾಲ್ ಪುತ್ತೂರು , ಮೇ 23, 2026ರಂದು ನಡೆಯಲಿರುವ ವಾರ್ಷಿಕ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀದರ ನಡುಹಿತ್ಲು ಅವರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೈವದಪಾತ್ರಿ ಶ್ರೀ ರಾಮ ಪಂಜದಗುಡ್ಡೆ, ಮಂದಿರದ ಅರ್ಚಕರಾದ ಶ್ರೀ ಪ್ರಭಾಕರ ದೊಡ್ಡಹಿತ್ಲು, ಶ್ರೀ ಕೋಮಾರಾಯ ಪರಿವಾರ ದೈವಗಳ ಸನ್ನಿದಿಯ ಆಡಳಿತ ಸಮಿತಿ ಅಧ್ಯಕ್ಷರಾದ ಬಾಸ್ಕರ ಪಯ್ಯರ್ಮೆ, ಜನಾರ್ದನ ನಡುಹಿತ್ತಿಲು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು