ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಅಭಿನಂದನಾ ಸಭೆ 24 ರಂದು

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಶ್ರೀ ಭಾರತ್ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಲಿದೆ

ಸಭೆಯ ಅಧ್ಯಕ್ಷತೆಯನ್ನು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗಧರ್ಶಕಿ ಶ್ರೀಮತಿ ರಮ್ಯಾ ಯನ್ ಸೀತಾಂಗೋಳಿ ವಹಿಸಲಿರುವರು. ದಿಕ್ಸೂಚಿ ಭಾಷಣವನ್ನು ಶ್ರೀ ವಿಠಲ ನಾಯಕ್ ಕಲ್ಲಡ್ಕ (ಗೀತಾ ಸಾಹಿತ್ಯ ಸಂಭ್ರಮದ ರೂವಾರಿ ) ಮಾಡಲಿರುವರು.

ಮುಖ್ಯ ಅತಿಥಿಗಳಾಗಿ ಶ್ರೀ ಪ್ರಜಿತ್ ಅಭಕಾರಿ ಅಧಿಕಾರಿ ಕುಂಬಳೆ, ವಸುದೈವ ಭಜನಾ ಕುಟುಂಬ ಅಖಂಡ ಭಾರತ ಇದರ ಸದಸ್ಯ ರವಿ ಮಂಜನಾಡಿ, ಸಾಮಾಜಿಕ ಕಾರ್ಯಕರ್ತ ಲೋಕೇಶ್ ನೋಂಡ ಜೋಡುಕಲ್ಲು, ಪದ್ಮಾಶಾಲಿ ಸಮಾಜ ಸೇವಾ ಸಮಿತಿ ಪೈವಳಿಕೆ ಇದರ ಅಧ್ಯಕ್ಷ ಉಮೇಶ್ ಕುಂಡೇರಿ, ಭಜನಾ ಶಿಕ್ಷಕಿ ಸಂಧ್ಯಾ ಮಾತಾಜಿ, ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಅತಿಥಿಗಳಾಗಿ ಭಾಗವಹಿಸಲಿರುವರು ಎಸ್.ಎಸ್. ಎಲ್.ಸಿ ಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಪಡೆದ ಭಜನಾ ವಿದ್ಯಾರ್ಥಿಗಳನ್ನು ಮತ್ತು ಭಜನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲು ಇರುತ್ತದೆ ಈ ಕಾರ್ಯಕ್ರಮಕ್ಕೆ ಎಲ್ಲ ಭಜನಸಕ್ತರನ್ನು ಸಮಿತಿಯ ಪರವಾಗಿ ಅಮಂತ್ರಿಸಿರುತ್ತಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!