ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆಯು ಇತ್ತೀಚೆಗೆ ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗದರ್ಶಕಿ ಶ್ರೀಮತಿ ರಮ್ಯಾ ಯನ್ ಧರ್ಬೆತಡ್ಕ ವಹಿಸಿದರು .ಸಭೆಯನ್ನು ಶ್ರೀ ಪ್ರಜಿತ್ ಅಭಕಾರಿ ಅಧಿಕಾರಿ ಕುಂಬಳೆ ಇವರು ಉದ್ಘಾಟಿಸಿದರು .
ಮುಖ್ಯ ಅತಿಥಿಗಾಳಗಿ ವಸುದೈವ ಭಜನಾ ಕುಟುಂಬ ಅಖಂಡ ಭಾರತ ಇದರ ಸದಸ್ಯ ರವಿ ಮಂಜನಾಡಿ, ಪದ್ಮಾಶಾಲಿ ಸಮಾಜ ಸೇವಾ ಸಮಿತಿ ಪೈವಳಿಕೆ ಇದರ ಅಧ್ಯಕ್ಷ ಉಮೇಶ್ ಕುಂಡೇರಿ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಕ ಶ್ರೀ ಪುರುಷೋತ್ತಮ ಪ್ರತಾಪನಗರ, ಶ್ರೀ ನಿತ್ಯಾನಂದ ಯೋಗಶ್ರಮ ಕೊಂಡೇವೂರು ಇದರ ಭಜನಾ ಪ್ರಮುಖ ಪ್ರಮೋದ್ ಕಯ್ಯಾರು, ಛಾಯಸುತ ಕುಣಿತ ಭಜನಾ ತಂಡದ ಶಿಕ್ಷಕಿ, ಕುಣಿತ ಭಜನಾ ತೀರ್ಪುಗಾರ್ತಿ ಕುಮಾರಿ ಮೇಘಶ್ರೀ ಮಂಜೇಶ್ವರ , ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಅತಿಥಿಗಳಾಗಿ ಭಾಗವಹಿಸಿದರು
ಪ್ರಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ದ ಕಾರ್ಯಕ್ರಮದಲ್ಲಿ ಕುಣಿತ ಭಜನಾ ಕಾರ್ಯಕ್ರಮವು ನಡೆಯಿತು. ಸಭೆಯಲ್ಲಿ 2025-26 ನೇ ಸಾಲಿನಲ್ಲಿ S S L C ಪರೀಕ್ಷೆ ಯಲ್ಲಿ 80% ಅಂಕಕ್ಕಿಂತ ಹೆಚ್ಚು ಅಂಕ ಪಡೆದ ಭಜನಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಮತ್ತು ಭಜನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಪ್ರಧಾನ ಸಂಚಾಲಕ ಸತೀಶ್ ಕುಮಾರ್ ಕಾಪು ಪ್ರಸ್ತಾವಿಸಿ ಸ್ವಾಗತಿಸಿದ ಕಾರ್ಯಕ್ರಮ ವನ್ನು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಸಂಚಾಲಕ ಮಂಜುನಾಥ ಪರಂಬಳ ದನ್ಯವಾದವಿತ್ತರು