​ಮಂಜೇಶ್ವರ: ಉದ್ಯಾವರದಲ್ಲಿ ಕೋಳಿ ಅಂಗಡಿಗೆ ಕಳ್ಳರ ಲಗ್ಗೆ; 20 ಸಾವಿರ ರೂಪಾಯಿ ನಗದು ಕಳವು

​ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ನಗದನ್ನು ದೋಚಿರುವ ಘಟನೆ ನಡೆದಿದೆ.


​ಉದ್ಯಾವರದ ರಫೀಕ್ ಎಂಬುವರಿಗೆ ಸೇರಿದ ಕೋಳಿ ಅಂಗಡಿಯನ್ನು ಗುರಿಯಾಗಿಸಿ ಈ ಕೃತ್ಯ ನಡೆದಿದೆ. ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ಸುಮಾರು 20,000 ರೂಪಾಯಿ ನಗದನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
​ಬುಧವಾರ ಬೆಳಿಗ್ಗೆ ಅಂಗಡಿಯ ಮಾಲಕರು ಬಂದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!