ಪೈವಳಿಕೆ: ರಾಜಕೀಯ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಯುವ ಕಾರ್ಯಕರ್ತರು ಪಕ್ಷದ ಸಿದ್ಧಾಂತ, ತತ್ವ, ಇತಿಹಾಸ ಹಾಗೂ ಭವಿಷ್ಯದ ಯೋಜನೆಗಳನ್ನು ಅರಿತು ಕಾರ್ಯನಿರ್ವಹಿಸಿದರೆ ನಾಯಕತ್ವ ಗುಣಗಳು ವೃದ್ಧಿಯಾಗುತ್ತವೆ ಎಂದು ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು.
ಅವರು ಬಿಜೆಪಿ ಮಂಜೇಶ್ವರ ಮಂಡಲದ ಪ್ರಶಿಕ್ಷಣ ಶಿಬಿರವನ್ನು ಸಜಂಕಿಲ ಅವಲ ಮಠ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. “ಬಿಜೆಪಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ಅದರ ಸಿದ್ಧಾಂತಗಳನ್ನು ಅರಿತು ಕಾರ್ಯನಿರ್ವಹಿಸುವುದು ಅಗತ್ಯ” ಎಂದು ಅವರು ಹೇಳಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ವಹಿಸಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಮುಖಂಡರಾದ ಮಣಿಕಂಠ ರೈ, ಎ.ಕೆ. ಕೈಯ್ಯರ್, ಲೋಕೇಶ್ ನೊಂದ, ಸುನಿಲ್ ಪಿ.ಆರ್, ಮುರಳೀಧರ ಯಾದವ್, ಸಲೀಲ್ ಮಾಸ್ಟರ್, ಯಾದವ ಬಡಾಜೆ, ಹರೀಶಚಂದ್ರ ಎಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಬ್ರಮಣ್ಯ ಭಟ್ ಅಟಿಕುಕ್ಕೆ ಸ್ವಾಗತ ಭಾಷಣ ಮಾಡಿದರು. ಯತೀರಾಜ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.
ಗಣೇಶ್ ಪ್ರಸಾದ್ ಚೇರಲ್, ರಮೇಶ್ ಅಟೆಗೋಳಿ, ಪ್ರವೀಣ್ ರೈ, ಕೀರ್ತಿ ಭಟ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.


