ಕಾಸರಗೋಡು: ಸಿಪಿಐ(ಎಂ) ಲೋಕಲ್ ಕಮಿಟಿ ಕಚೇರಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ವಿಶಾಲ್ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ತಾಯನ್ನೂರು ಸಿಪಿಐ(ಎಂ) ಲೋಕಲ್ ಕಮಿಟಿ ಕಚೇರಿಯ ಮೇಲೆ ದಾಳಿ ನಡೆದಿತ್ತು.

ದಾಳಿಯಲ್ಲಿ ಕಚೇರಿಯ ಕಿಟಕಿಗಳ ಗಾಜುಗಳು ಹಾಗೂ ಧ್ವಜಸ್ತಂಭಗಳಿಗೆ ಹಾನಿಯಾಗಿದೆ.ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಸಿಪಿಐ(ಎಂ) ಆರೋಪಿಸಿತ್ತು. ಉದ್ದೇಶಪೂರ್ವಕವಾಗಿ ಸಂಘರ್ಷ ಸೃಷ್ಟಿಸಲು ಈ ಕೃತ್ಯ ಎಸಗಲಾಗಿದೆ ಎಂದು ಪಕ್ಷದ ನಾಯಕರು ಹೇಳಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


