ಅರಿವಳಿಕೆ ನೀಡಿದ ಬೆನ್ನಲ್ಲೇ ಸ್ಥಿತಿ ಗಂಭೀರಗೊಂಡಿದ್ದ ಒಂದೂವರೆ ವರ್ಷದ ಮಗು ಸಾವು

ಕಾಸರಗೋಡು/​ಕಣ್ಣೂರು: ಅರಿವಳಿಕೆ ನೀಡಿದ ಬಳಿಕ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿದೆ.ಪಯ್ಯನ್ನೂರಿನ ನಿವಾಸಿ ಸೂರಜ್ ಅವರ ಪುತ್ರ ದೇವಾಂಶ್ ಶೌರ್ಯ ಮೃತಪಟ್ಟ ಮಗು.

​ಪಯ್ಯನ್ನೂರಿನ ಬೇಬಿ ಮೆಮೊರಿಯಲ್ ಆಸ್ಪತ್ರೆಯಲ್ಲಿ ಮಗುವಿಗೆ ಅರಿವಳಿಕೆ ನೀಡಿದ ನಂತರ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಬಳಿಕ ಕಣ್ಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದಿದೆ.

​ಕೆಲವು ದಿನಗಳ ಹಿಂದೆ ಆಟವಾಡುವಾಗ ಮಗುವಿನ ತುಟಿ ಮತ್ತು ಗಲ್ಲಕ್ಕೆ ಗಾಯವಾಗಿತ್ತು. ಹೊಲಿಗೆ ಹಾಕುವ ಸಲುವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅರಿವಳಿಕೆ ನೀಡಿದ ಬೆನ್ನಲ್ಲೇ ಮಗು ಅಪ್ರಜ್ಞಾಪಸ್ಥಿತಿಗೆ ಜಾರಿತು. ತಕ್ಷಣವೇ ಮಗುವನ್ನು ಕಣ್ಣೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

​ಮಗುವಿನ ಸಾವಿಗೆ ಚಿಕಿತ್ಸೆಯಲ್ಲಿನ ಲೋಪವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ದೂರಿನನ್ವಯ ಆಸ್ಪತ್ರೆಯ ವೈದ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಂಟು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಜನಿಸಿದ್ದ ಮಗುವನ್ನು ಕಳೆದುಕೊಂಡು ಕುಟುಂಬಸ್ಥರು ಆಘಾತದಲ್ಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!