ಕಾಸರಗೋಡು ಕಡಲತೀರದಲ್ಲಿ ತಲೆ ಇಲ್ಲದ ಶವ ಪತ್ತೆ; ಸ್ಥಳೀಯರಲ್ಲಿ ಆತಂಕ

​ಕಾಸರಗೋಡು: ನಗರದ ಲೈಟ್ ಹೌಸ್ ಬಳಿಯ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ ತಲೆ ಇಲ್ಲದ ಮನುಷ್ಯನ ಮೃತದೇಹ ಪತ್ತೆಯಾಗಿದ್ದು, ಭಾರೀ ಸಂಚಲನ ಮೂಡಿಸಿದೆ. ಮೀನುಗಾರರಿಗೆ ಪತ್ತೆಯಾದ ಈ ಶವವು ಸುಮಾರು ಒಂದು ತಿಂಗಳಷ್ಟು ಹಳೆಯದಾಗಿದ್ದು, ಕೊಳೆತ ಸ್ಥಿತಿಯಲ್ಲಿದೆ. ತಲೆ ಭಾಗವು ಶರೀರದಿಂದ ಬೇರ್ಪಟ್ಟಿದ್ದು, ಎಲುಬುಗಳು ಗೋಚರಿಸುತ್ತಿವೆ.

​ಇದು ಆತ್ಮಹತ್ಯೆಯೇ ಅಥವಾ ಯಾರಾದರೂ ಕೃತ್ಯವೆಸಗಿ ಸಮುದ್ರಕ್ಕೆ ಎಸೆದ ಕೊಲೆಯೋ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಈ ನಿಗೂಢ ಮರಣದ ಜಾಡನ್ನು ಹಿಡಿದಿರುವ ಕಾಸರಗೋಡು ನಗರ ಠಾಣಾ ಪೊಲೀಸರು, ಇತ್ತೀಚಿನ ದಿನಗಳಲ್ಲಿ ನಾಪತ್ತೆಯಾದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ಸತ್ಯ ಹೊರಬರಬೇಕಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!