ಕಾಸರಗೋಡು/ ಕೊಚ್ಚಿ :ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಜನಪ್ರಿಯ ಯೂಟ್ಯೂಬರ್ ‘ತೊಪ್ಪಿ’ ಅಲಿಯಾಸ್ ಮುಹಮ್ಮದ್ ನಿಹಾಲ್‌ನ ಚಾನೆಲ್ ಅನ್ನು ಯೂಟ್ಯೂಬ್ ಸಂಸ್ಥೆ ಡಿಲೀಟ್ ಮಾಡಿದೆ.

ಆಲುವ ಸೈಬರ್ ಪೊಲೀಸ್ ನೀಡಿದ ವರದಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಅಡ್ವಕೇಟ್ ಶ್ರೀಜಿತ್ ಪೆರುಮನ ಅವರ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದು, ನೋಟಿಸ್ ನೀಡಿದ್ದರೂ ನಿಹಾಲ್ ವಿಚಾರಣೆಗೆ ಹಾಜರಾಗಿಲ್ಲ. ಈತ ಎಂಡಿಎಂಎ ಸೇವನೆ, ಅಶ್ಲೀಲ ಪ್ರಸಾರ, ಪೋಕ್ಸೋ ಪ್ರಕರಣ ಮತ್ತು ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ.

ಆತನ ಸ್ನೇಹಿತರೇ ಈ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಆರೋಪದ ಗಂಭೀರತೆ ಪರಿಗಣಿಸಿ, ಈತನಿಗೆ ಜಾಮೀನು ನೀಡಬಾರದೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

