ಸಾವರ್ಕರ್ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಸಂಪೂರ್ಣ ಸಿದ್ಧಾಂತ. ಅವರು ಕೇವಲ ಕಿಡಿಯಲ್ಲ, ಧಗಧಗಿಸುವ ಜ್ವಾಲೆ. ಅವರನ್ನು ಯಾವುದೇ ಸಣ್ಣ ವ್ಯಾಖ್ಯಾನಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ”. ವೀರ ಸಾವರ್ಕರ್ ಅವರು ಬ್ರಿಟಿಷರ ಆಡಳಿತಾವಧಿಯಲ್ಲಿ ಒಟ್ಟು ಸುಮಾರು 24 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು. ಬ್ರಿಟಿಷ್ ಸರ್ಕಾರ ಅವರಿಗೆ ಒಂದೇ ಜನ್ಮದಲ್ಲಿ ಎರಡು ಜೀವಾವಧಿ ಶಿಕ್ಷೆ ಸೇರಿ ಒಟ್ಟು 50 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. 14 ವರ್ಷಗಳ ನಂತರ ಅವರನ್ನು ಬಿಡುಗಡೆ ಮಾಡಿ, ಮುಂದಿನ 13 ವರ್ಷಗಳ ಕಾಲ ರತ್ನಗಿರಿಯಲ್ಲಿ ಗೃಹಬಂಧನದಲ್ಲಿ (ಜಿಲ್ಲೆಯನ್ನು ತೊರೆಯದಂತೆ ನಿರ್ಬಂಧ) ಇಡಲಾಗಿತ್ತು.


ಸಾವರ್ಕರ್ ಅವರು ತಮ್ಮ ಶಿಕ್ಷೆಯ ಅವಧಿಯಲ್ಲಿ ಇದ್ದ ಪ್ರಮುಖ ಜೈಲುಗಳು ಮತ್ತು ಕಾಲಾವಧಿ ಈ ಕೆಳಗಿನಂತಿದೆ:
- ಬ್ರಿಕ್ಸ್ಟನ್ ಜೈಲು (ಲಂಡನ್, ಇಂಗ್ಲೆಂಡ್) – 1910
ಲಂಡನ್ನಲ್ಲಿ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರನ್ನು ಮಾರ್ಚ್ 1910 ರಲ್ಲಿ ಮೊದಲ ಬಾರಿಗೆ ಲಂಡನ್ನಲ್ಲಿ ಬಂಧಿಸಿ ಈ ಜೈಲಿನಲ್ಲಿ ಇಡಲಾಗಿತ್ತು. - ಸೆಲ್ಯುಲರ್ ಜೈಲು (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು) – 1911 ರಿಂದ 1921
- ಇದು ಸಾವರ್ಕರ್ ಅವರು ಅತ್ಯಂತ ಕಠಿಣ ಮತ್ತು ಅತಿ ದೀರ್ಘಕಾಲ ಕಳೆದ ಕುಖ್ಯಾತ ಜೈಲು (ಕಾಲಾಪಾನಿ ಶಿಕ್ಷೆ).
- ಇಲ್ಲಿ ಅವರು ಸುಮಾರು 10 ವರ್ಷಗಳ ಕಾಲ ಕಠಿಣ ದೈಹಿಕ ಶ್ರಮ, ಏಕಾಂತ ವಾಸ ಮತ್ತು ಬ್ರಿಟಿಷರ ಅಮಾನವೀಯ ಕಿರುಕುಳವನ್ನು ಎದುರಿಸಿದರು.
- ಈ ಜೈಲಿನ ಕೋಣೆಯ ಗೋಡೆಗಳ ಮೇಲೆಯೇ ಅವರು ಮೊಳೆ ಮತ್ತು ಮುಳ್ಳುಗಳನ್ನು ಬಳಸಿ ಸಾವಿರಾರು ಸಾಲುಗಳ ಕವಿತೆಗಳನ್ನು ಬರೆದಿದ್ದರು.

3. ಅಲಿಪುರ ಸೆಂಟ್ರಲ್ ಜೈಲು (ಕೋಲ್ಕತ್ತಾ) – 1921
ಅಂಡಮಾನ್ನಿಂದ ಭಾರತದ ಪ್ರಧಾನ ಭೂಭಾಗಕ್ಕೆ ಮರಳಿ ಕರೆತಂದಾಗ ಅವರನ್ನು ಮೊದಲು ಕೋಲ್ಕತ್ತಾದ ಅಲಿಪುರ ಜೈಲಿನಲ್ಲಿ ಕೆಲ ದಿನಗಳ ಕಾಲ ಇರಿಸಲಾಗಿತ್ತು.
4. ರತ್ನಗಿರಿ ಜಿಲ್ಲಾ ಜೈಲು (ಮಹಾರಾಷ್ಟ್ರ) – 1921 ರಿಂದ 1923
ಕೋಲ್ಕತ್ತಾದಿಂದ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಿದ ನಂತರ ರತ್ನಗಿರಿಯ ಜೈಲಿನಲ್ಲಿ ಇರಿಸಲಾಯಿತು. ಇದೇ ಜೈಲಿನಲ್ಲಿದ್ದಾಗ ಅವರು ತಮ್ಮ ಪ್ರಸಿದ್ಧ ‘ಹಿಂದುತ್ವ’ ಸಿದ್ಧಾಂತದ ಕೈಪಿಡಿಯನ್ನು ಸಿದ್ಧಪಡಿಸಿದರು.
5. ಯೆರವಾಡ ಸೆಂಟ್ರಲ್ ಜೈಲು (ಪುಣೆ, ಮಹಾರಾಷ್ಟ್ರ) – 1923 ರಿಂದ 1924
ಅವರ ಜೈಲು ಶಿಕ್ಷೆಯ ಕೊನೆಯ ಭಾಗವನ್ನು ಪುಣೆಯ ಯೆರವಾಡ ಜೈಲಿನಲ್ಲಿ ಕಡೀದರು. ಜನವರಿ 6, 1924 ರಂದು ಕೆಲವು ಕಠಿಣ ನಿಬಂಧನೆಗಳೊಂದಿಗೆ ಇವರನ್ನು ಜೈಲಿನಿಂದ ಮುಕ್ತಗೊಳಿಸಲಾಯಿತು.
ಪ್ರಧಾನಿ ಆಗಿದ್ದಾಗ ಇಂದಿರಾ ಗಾಂಧಿ ವೀರ್ ಸಾವರ್ಕರ್ ಫೋಟೋ ಇರುವ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದರು.
ಮಹಾತ್ಮಾ ಗಾಂಧಿ ಸಾವರ್ಕರ್ ರನ್ನು ದೇಶದ ವೀರ ಪುತ್ರ ಅಂದಿದ್ದರು.

ಆದರೆ ಇಂದಿನ ಕಾಂಗ್ರೆಸ್ ನವರಿಗೆ ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ ಯನ್ನೇ ವಿರೋಧಿಸಿ ಸಾವರ್ಕರ್ ರನ್ನು ವಿರೋದಿಸುತ್ತಾರೆ.
-ಅಟಲ್ ಬಿಹಾರೀ ವಾಜಪೇಯಿ ಸಾವರ್ಕರ್ ಬಗ್ಗೆ ಲೋಕಸಭೆ ಯಲ್ಲಿ ಮಾಡಿದ ವರ್ಣನೆ 🙏🏾
ಸಾವರ್ಕರ್ ಎಂದರೆ ತೇಜಸ್ಸು (Tej)…”
“ಸಾವರ್ಕರ್ ಎಂದರೆ ತ್ಯಾಗ (Tyag)…”
“ಸಾವರ್ಕರ್ ಎಂದರೆ ತಪಸ್ಸು (Tap)..
.””
“ಸಾವರ್ಕರ್ ಎಂದರೆ ತತ್ವ (Tattva),
ಸಾವರ್ಕರ್ ಎಂದರೆ ತರ್ಕ (Tark)…
“”ಸಾವರ್ಕರ್ ಎಂದರೆ ತಾರುಣ್ಯ (Tarunya).
..””ಸಾವರ್ಕರ್ ಎಂದರೆ ತೀಕ್ಷ್ಣ ಬಾಣ (Teer)
,ಸಾವರ್ಕರ್ ಎಂದರೆ ಮಸೆಯದ ಕತ್ತಿ (Talwar)!”.

ಜೈ ವೀರ ಸಾವರ್ಕರ್….
✍🏾
ಆದರ್ಶ ಬಿ ಎಂ
ಅಧ್ಯಕ್ಷರುಬಿಜೆಪಿ ಮಂಜೇಶ್ವರ


