ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲು ಇಲ್ಲಿ ಬಹಳ ವಿಜ್ರಂಭಣೆಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಅಬ್ಬಾಸ್ ಪಮ್ಮಾರ್ ವಹಿಸಿದ್ದರು. ದ್ವಜಾರೋಹಣವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸಂಜೀವ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮೀಂಜ ಪಂಜಾಯತ್ ಉಪಾಧ್ಯಕ್ಷೆಯಾದ ಶ್ರೀಮತಿ ಉಷಾ ಪೂಂಜ ಅವರು ಭಾಗವಹಿಸಿದ್ದರು.


ಶ್ರೀಯುತ ಶಿವರಾಮ ಪದ ಕಣ್ಣಾಯ,ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ, ಶ್ರೀ ಶಶಿ , ಶ್ರೀ ರಾಂ ಪ್ರಕಾಶ್, ಮಾಜಿ ಮೀಂಜ ಪಂಚಾಯತ್ ಉಪಾಧ್ಯಕ್ಷ ಶ್ರೀ ಜಯರಾಮ ಬಲ್ಲಂಗುಡೆಲು , ಅಡ್ವಕೇಟ್ ಶ್ರೀ ದಾಮೋದರ ಶೆಟ್ಟಿ, ಶ್ರೀ ಅಬ್ದುಲ್ಲಾ ಪಜಿಂಗಾರ್, ಜಗದೀಶ್ ಮೂಡಂಬೈಲು, ಶ್ರೀ ರಮೇಶ್ ಸುವರ್ಣ, ಹೆಂಡ್ರಿ ಡಿಸೋಜ , ಶಾಲಾ MPTA ಉಪಾಧ್ಯಕ್ಷೆ ಶ್ರೀಮತಿ ಸುಮಯ್ಯ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮೂಹಗೀತೆ, ಭಾಷಣ ಮೊದಲಾದುವುಗಳು ನಡೆದವು, ಹಾಗೂ ಸ್ವಾತಂತ್ರ್ಯ ದಿನಾಚರಣೆ ಭಾಗವಾಗಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ಮ್ಯಾಗಜಿನ್ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷವನ್ನು ಧರಿಸಿ ಬಂದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಹಾಗೂ ಶಾಲಾ ಅಧ್ಯಾಪಕ ಅಧ್ಯಾಪಿಕೆಯರಿಂದ ಸಮೂಹ ಗಾನ ನಡೆಯಿತು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು.


ಅಧ್ಯಾಪಿಕೆಯರಾದ ಮೋಹಿನಿ, ನೀವೇದಿತ, ಸುಷ್ಮಾ, ಸವಿತ , ತ್ರೀಲತ, ಬುಶ್ರ, ಅಂಜಲಿ, ರಮ್ಲ, ರಹಮತ್ , ಜಯಲಕ್ಷ್ಮಿ, ಶೈನಿ , ಅರುಣ್ ಹಾಗೂ SRG ಕನ್ವೀನರ್ ಶ್ರೀ ರಾಜೇಶ್ ಕೊಡ್ಲಮೊಗರು ಸಹಕರಿಸಿದರು. ಕುಮಾರಿ ಸೀತ ಟೀಚರ್ ಕಾರ್ಯಕ್ರಮ ನಿರೂಪಿಸಿದರು, ಹಾಗೂ ಸೀನಿಯರ್ ಅಸಿಸ್ಟೆಂಟ್ ಶ್ರೀಮತಿ ದಯಾವತಿ ಸಾಲ್ಯಾನ್ ಧನ್ಯವಾದ ಸಮರ್ಪಿಸಿದರು.


