ಮಂಗಳೂರು :ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಸಭೆಯ ಸ್ಥಳವನ್ನು ಅಶುಧ್ದಗೊಂಡಿದೆ ಎಂದು ಶುದ್ದೀಕರಣಗೊಳಿಸಿದ ಕಾರ್ಯವನ್ನು ಖಂಡಿಸಿ
ಮಂಗಳೂರು ಪಾಲಿಕೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇತ್ತೀಚಿಗೆ ಉತ್ತರಖಂಡದ ಹಲ್ದ್ವಾನಿ ರಾಮಲೀಲ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ಅಶುದ್ಧಿಗೊಂಡಿದೆ ಎಂದು ಅಸಂಧಾನಿಕ ಹೇಳಿಕೆ ನೀಡಿ ಸ್ಥಳ ಶುದ್ಧೀಕರಣ ನಡೆಸಲಾಗಿದೆ ಎಂದಾರೋಪಿಸಲಾಗಿದೆ. ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರ ಈ ನಡೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಶುಕ್ರವಾರ ಸಂಜೆ ಲಾಲ್ ಭಾಗ್ ಪಾಲಿಕೆ ಕಚೇರಿ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ಸಭೆ ನಡೆಸಿತು. ಸಭೆಯಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಲಾಯಿತು.

ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಖಂಡರಾದ ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಲಾವಣ್ಯ ಬಳ್ಳಾಲ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಎಸ್.ಅಪ್ಪಿ, ನವೀನ್ ಡಿಸೋಜ, ಕೇಶವ ಮರೋಳಿ, ನೀರಜ್ ಚಂದ್ರಪಾಲ್, ಭಾಸ್ಕರ್ ಕೆ, ಪ್ರೇಮ್ ಬಳ್ಳಾಲ್ ಭಾಗ್, ಶುಭೋದಯ ಆಳ್ವ, ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ಶಬೀರ್.ಎಸ್, ಸುಹೈಲ್ ಕಂದಕ್,ರಮಾನಂದ ಪೂಜಾರಿ, ಬಶೀರ್ ಅಡ್ಯಾರ್, ಸುಹಾನ್ ಆಳ್ವ, ಚಂದ್ರಕಲಾ ಜೋಗಿ, ಎ ಸಿ ವಿನಂರಾಜ್,ಸಬಿತಾ ಮಿಸ್ಕಿತ್, ನಾಗವೇಣಿ, ಕವಿತ ವಾಸು, ಸಾರಿಕ ಪೂಜಾರಿ, ನ್ಯಾನ್ಸಿ, ಸತೀಶ್ ಪೆಂಗಲ್, ತನ್ವೀರ್ ಶಾ, ಪದ್ಮನಾಭ ಅಮೀನ್, ಸೌಹಾನ್ ಎಸ್.ಕೆ, ಶಾಂತಲಾ ಗಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

