ಕುಂಬಳೆ : ರಂಗ ಡಿಂಡಿಮ(ರಿ )ಕಾಸರಗೋಡು ಇದರ ನೇತೃತ್ವದಲ್ಲಿ ಒಂದು ದಿನದ ರಂಗ ಭೂಮಿ ಕಾರ್ಯಗಾರವು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಜರಗಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಂಗ ಕಲಾವಿದ ರವಿ ಮಲ್ಲಾವರ ಭಾಗವಹಿಸಿ ಮಾತನಾಡಿ, “ರಂಗ ಭೂಮಿಯು ಜೀವನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಪರಸ್ಪರ ಪ್ರೀತಿ ವಿಶ್ವಾಸದ ಬದುಕಿನ ಪಾಠವನ್ನು ಕಲಿಸುತ್ತದೆ ಎಂದು ತಿಳಿಸಿದರು.


ರಂಗ ಕರ್ಮಿ ಅಶೋಕ್ ಕೊಡ್ಲಮೊಗರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಂಗ ನಟ ಯಕ್ಷಗಾನ ಕಲಾವಿದ, ಪತ್ರಕರ್ತರಾದ ಪುರುಷೋತ್ತಮ ಭಟ್, ಶ್ಯಾಮ್ ಪಡ್ರೆ ಸಂಪನ್ಮೂಲ ವ್ಯಕ್ತಿಗಳಾದ ವಿದ್ದು ಉಚ್ಚಿಲ, ಮೇಘನಾ ಕುಂದಾಪುರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ರಂಗ ಡಿಂಡಿಮದ ಅಧ್ಯಕ್ಷರಾದ ಉದಯ್ ಸಾರಂಗ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


