ರಂಗಾಸಕ್ತ ಕನ್ನಡ ಅಧ್ಯಾಪಕರ ಒಕ್ಕೂಟವಾದ ರಂಗಚೇತನ ಕಾಸರಗೋಡು ಇವರು ಓಣಂ ಕುಟುಂಬ ಸಂಗಮವನ್ನು ಏರ್ಪಡಿಸಲಾಯಿತು .ಬಿ. ಪಿ. ಪಿ. ಎ. ಎಲ್. ಪಿ.ಶಾಲೆ ಪೆರ್ಮುದೆ ಯಲ್ಲಿ ಸಂಘಟನೆಯ ಸದಸ್ಯರು ಮತ್ತು ಮನೆಯವರು ಈ ಸೌಹಾರ್ದಕೂಟವನ್ನು ಏರ್ಪಡಿಸಿದ್ದರು. ಬೆಳಗ್ಗೆ ಹೂ ರಂಗೋಲಿ ಮತ್ತು ಸದಸ್ಯರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಿದ್ಧ ಮದರ್ ನೇಚರ್ ಚಿತ್ರಕಲಾವಿದ ವಿಶ್ವಾಸ್ ಮತ್ತು ಧರ್ಮತಡ್ಕ ಶಾಲೆಯ ಪ್ರಬಂಧಕರಾದ ಶಂಕರ ನಾರಾಯಣ ಭಟ್ ನೆರವೇರಿಸಿದರು.

ರಂಗ ಚೇತನ ಸದಸ್ಯರಾದ ಪ್ರಸಾದ್ ಮಾಸ್ಟರ್ ಮುಗು ಅವರ ಸಂಗ್ರಹದ ವಸ್ತು ಪ್ರದರ್ಶನವನ್ನು ಕುಡಾಲ್ ಮೇರ್ಕಳ ಶಾಲೆಯ ನಿವೃತ್ತ ಅಧ್ಯಾಪಕ ಖಾದರ್ ಮಾಸ್ಟರ್ ಉದ್ಘಾಟಿಸಿದರು.ಮಧ್ಯಾಹ್ನ ಓಣಂ ಭೋಜನವನ್ನು ಏರ್ಪಡಿಸಲಾಯಿತು.ಮೆಲ್ವಿನ್ ಮತ್ತು ದಿವಾಕರ ಬಲ್ಲಾಳ್ ಅವರಿಂದ ಸಂಗೀತ ಭೋಜನ ನಡೆಯಿತು.




ಸಮಾರೋಪದಲ್ಲಿ ಸಂಘಟನೆಯ ಅಧ್ಯಕ್ಷ ಯತೀಶ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಲೋಲಾಕ್ಷಿ ಟೀಚರ್, ಮೂಡಂಬೈಲು ಶಾಲಾ ಮುಖ್ಯೋಪಾಧ್ಯಾಯ ಸಂಜೀವ ಮಾಸ್ಟರ್ ಬಹುಮಾನ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಸದಾಶಿವ ಬಾಲಮಿತ್ರ,
ವಸಂತ ಮೂಡಂಬೈಲು,ಪ್ರಮೀಳಾ ಮಾಡೂರು,ಶಿವ ಪ್ರಸಾದ್ ಚೆರುಗೋಳಿ, ಅಶೋಕ ಕೊಡ್ಲಮೊಗರು,ರಾಜಕುಮಾರ್ ಕಾಟುಕುಕ್ಕೆ, ಗುರುರಾಜ್ ಕೋಳ್ಯೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಗೋಪಾಲ ಕಾಟುಕುಕ್ಕೆ ಸ್ವಾಗತಿಸಿ ಶಿವರಾಮ ಕಾಟುಕುಕ್ಕೆ ವಂದಿಸಿದರು.



This place has a great vibe and the bonuses are actually fair. I am really enjoying my time on inyooe777 lately.