ಚಿಪ್ಪಾರ್:ಜನಶಕ್ತಿ ಫ್ರೆಂಡ್ಸ್ ಕ್ಲಬ್ ಚಿಪ್ಪಾರ್ನ ಆಶ್ರಯದಲ್ಲಿ ಆಯೋಜಿಸಿದ್ದ ಓಣಂ ಆಚರಣೆ ಭಾರಿ ಜನಪಾಲ್ಗೊಳ್ಳುವಿಕೆಯಿಂದ ಗಮನ ಸೆಳೆಯಿತು.

ಜಾತಿ, ಧರ್ಮ ಹಾಗೂ ರಾಜಕೀಯ ಭೇದವಿಲ್ಲದೆ ಸಾವಿರಾರು ಮಂದಿ ಭಾಗವಹಿಸಿದ ಈ ಕಾರ್ಯಕ್ರಮವು ಮಾನವ ಮೈತ್ರಿಯ ಸಂಗಮವಾಗಿ ಮಾರ್ಪಟ್ಟಿತು.

ಪ್ರಸಿದ್ಧ ಚಲನಚಿತ್ರ ಹಾಗೂ ನಾಟಕ ನಟಿ ರೂಪಶ್ರೀ ವೋರ್ಕಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯೆ ಯಶೋದಾ ಅಧ್ಯಕ್ಷತೆ ವಹಿಸಿದ್ದರು.


ಕೈಯಾರ್ ಕ್ರೈಸ್ಟ್ ಕಿಂಗ್ ಚರ್ಚ್ನ ಫಾದರ್ ವಿಶಾಲ್ ಮೋನಿಷ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಂಚಾಯತ್ ಸದಸ್ಯರಾದ ಝಕೀರ್ ಹುಸೈನ್, ಹಾರಿಸ್ ಪೈವಳಿಕೆ, ಶಶಿಕಲಾ ಹಾಗೂ ರಹಮತ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.


ಸುಮಾರು ಸಾವಿರ ಮಂದಿಗೆ ಓಣಂ ಸದ್ಯ ಏರ್ಪಡಿಸಲಾಗಿತ್ತು. ಇದರೊಂದಿಗೆ ವಿವಿಧ ಕಲಾ ಹಾಗೂ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು.
ಆಯೋಜನಾ ಸಮಿತಿ ಅಧ್ಯಕ್ಷ ಹಾಗೂ ಬ್ಲಾಕ್ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಚಿಪ್ಪಾರ್ ಅವರು ಸ್ವಾಗತಿಸಿ, ವಂದಿಸಿದರು.

