ಕುಂಬಳೆ ಪ್ರೆಸ್ ಫೋರಂನಲ್ಲಿ ‘ಮಾಧ್ಯಮೋಣಂ’ ಸಂಭ್ರಮ

ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೇತೃತ್ವದಲ್ಲಿ ‘ಮಾಧ್ಯಮೋಣಂ’ ಹೆಸರಿನಲ್ಲಿ ಓಣಂ ಆಚರಣೆಯನ್ನು ಆಯೋಜಿಸಲಾಯಿತು. ಮಾಧ್ಯಮ ಪ್ರತಿನಿಧಿಗಳು ಹಾಗೂ ಕುಟುಂಬ ಸದಸ್ಯರ ಸಂಗಮಕ್ಕೆ ವೇದಿಕೆಯಾದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಓಣಂ ಸದ್ಯವನ್ನು ಏರ್ಪಡಿಸಲಾಗಿತ್ತು.

ಸದಸ್ಯರ ಕುಟುಂಬಗಳ ಮಕ್ಕಳಿಗಾಗಿ ಮ್ಯೂಸಿಕಲ್ ಚೇರ್, ಬಲೂನ್ ಒಡೆಯುವಿಕೆ, ಓಣಂ ಹಾಡು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಪ್ರೆಸ್ ಫೋರಂ ಸದಸ್ಯರಿಗೆ ನೀಡಲಾದ ಓಣಂ ಕಿಟ್‌ಗಳನ್ನು ಯುವ ವ್ಯಾಪಾರಿ ಅಶ್ರಫ್ ಸ್ಕೈಲರ್ ವಿತರಿಸಿದರು.

ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕರ್ಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಓಣಂ ಸಹೋದರತ್ವ ಮತ್ತು ಒಗ್ಗಟ್ಟಿನ ಸಂದೇಶ ಸಾರುವ ಹಬ್ಬವಾಗಿದ್ದು, ಇಂತಹ ಸಾಮೂಹಿಕ ಆಚರಣೆಗಳು ಸಮಾಜದಲ್ಲಿ ಸ್ನೇಹವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ಹೇಳಿದರು.


ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲ ಕುಂಬಳ ಅಧ್ಯಕ್ಷತೆ ವಹಿಸಿದ್ದರು. ಕುಂಬಳ ಪಂಚಾಯತ್ ಮಾಜಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಮುಖ್ಯ ಅತಿಥಿಯಾಗಿದ್ದರು.

ಪ್ರೆಸ್ ಫೋರಂ ಕಾರ್ಯದರ್ಶಿ ಐ. ಮೊಹಮ್ಮದ್ ರಫೀಕ್ ಸ್ವಾಗತಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಭಟ್, ಸದಸ್ಯರಾದ ಅಬ್ದುಲ್ ಲತೀಫ್ ಉಳುವಾರ್, ರಶೀದ್ ಬಂದ್ಯೋಡ್ , ಕೆ.ಎಂ. ಸತ್ತಾರ್, ಧನರಾಜ್ ಉಪ್ಪಳ, ತಾಹಿರ್ ಉಪ್ಪಳ, ಸುಬೈರ್ ಕುಕ್ಕಾರ್, ಸೈನುದ್ದೀನ್ ಅಡ್ಕ, ಖಜಾಂಚಿ ಅಬ್ದುಲ್ ಲತೀಫ್ ಕುಂಬಳ ಮತ್ತಿತರರು ಮಾತನಾಡಿದರು.

SHARE
Loading spinner

One thought on “ಕುಂಬಳೆ ಪ್ರೆಸ್ ಫೋರಂನಲ್ಲಿ ‘ಮಾಧ್ಯಮೋಣಂ’ ಸಂಭ್ರಮ

Leave a Reply

Your email address will not be published. Required fields are marked *

error: Content is protected !!