ಕಾಸರಗೋಡು: ಶಿರಿಯಾ ಹೊಳೆಯಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಬಂದ ಕರಾವಳಿ ಕಾವಲು ಪಡೆಯನ್ನು ಕಂಡು ನದಿಗೆ ಹಾರಿದವರ ಪೈಕಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ.ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (26) ನಾಪತ್ತೆಯಾದ ಯುವಕ.

ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.ಪೊಲೀಸರು ದಾಳಿ ನಡೆಸುತ್ತಿದ್ದಂತೆ ದೋಣಿಯಲ್ಲಿದ್ದ ಮರಳು ಸಾಗಾಟಗಾರರು ದೋಣಿಯನ್ನು ತೊರೆದು ಹೊಳೆಗೆ ಹಾರಿದ್ದಾರೆ.ಅವರಲ್ಲಿದ್ದ ಇಬ್ಬರು ಈಜಿಕೊಂಡು ದಂಡೆ ಸೇರಿ ರಕ್ಷಣೆ ಪಡೆದರೆ, ಇಬ್ರಾಹಿಂ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.
ಘಟನೆಯ ಸುಳಿವು ಸಿಗುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಜಂಟಿಯಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.


